
ನಾಪೋಕ್ಲು ಜೂ.18 NEWS DESK : ಮೂರ್ನಾಡು ಶೌರ್ಯ ತಂಡದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ತಂಡದ ಸಂಯೋಜಕಿ ದಿವ್ಯ ಹಾಗೂ ಸೇವಾ ಪ್ರತಿನಿಧಿ ಕಾವೇರಿ ಅವರ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಕಸ-ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಹಳೆಯ ವಿದ್ಯಾರ್ಥಿಗಳಾದ ಪ್ರಶಾಂತ್ ಮುತ್ತಣ್ಣ ಕೋಳಿಮಾಡು, ಮಂಜು, ದಯಾನಂದ ಪೊನ್ನಚ್ಚನ, ಮಮತ ಬಾಕೀಲನ ಹಾಗೂ ಶೌರ್ಯ ತಂಡದ ಸದಸ್ಯರಾದ ದಿವ್ಯ , ಪುಷ್ಪ , ನಿರ್ಮಲ , ಅರುಣ್ ಕುಮಾರ್ ಮತ್ತು ಮುಖ್ಯ ಶಿಕ್ಷಕಿ ದಮಯಂತಿ, ಶಿಕ್ಷಕಿ ಸುನಿತಾ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









