ಮಡಿಕೇರಿ ಜು.21 : ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಜಿಲ್ಲೆಯ ದೇವರಕಾಡು ಪ್ರದೇಶದಲ್ಲಿ ಸ್ಥಳೀಯ ಸಸಿಗಳನ್ನು ನೆಡುವ ಅಭಿಯಾನವನ್ನು ಆಯೋಜಿಸುತ್ತಿದೆ.
ಕೊಡಗಿನ ದೇವರಕಾಡುಗಳಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕರಿಮರ, ಕರಡಿ ಮರ, ಬಿಳಿ ದೂಪ, ಕರಿ ದೂಪ, ಕಚಂಪುಳ್ಳಿ, ಅಂಟುವಾಳ, ನೇರಳೆ, ಹೊನ್ನೆ, ಬಳಂಜಿ, ಮುಂತಾದ ಸಸಿಗಳನ್ನು ನೆಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ದೇವರಕಾಡು/ದೇವಸ್ಥಾನ ಸಮಿತಿಗಳು ತಮ್ಮ ದೇವರಕಾಡುಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ನಾಣಯ್ಯ ಕೋಣೇರಿರ, (8105919596) ಸಹಾಯಕ ಪ್ರಾಧ್ಯಾಪಕರು, ಅರಣ್ಯ ಮಹಾವಿದ್ಯಾಲಯ, (Forestry College) ಪೊನ್ನಂಪೇಟೆ ಅವರನ್ನು ಸಂಪರ್ಕಿಸಬಹುದು.
ಈ ಯೋಜನೆಯನ್ನು ಕುಶಾಲನಗರದ ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SUCDEN India Pvt. LTD)ಪ್ರಾಯೋಜಿಸುತ್ತಿದೆ.