ಮಡಿಕೇರಿ ಜು.22 : ಕೊಡಗಿನ ಗಡಿ ಕರಿಕೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ, ಭಾಗಮಂಡಲ-ಕರಿಕೆ ನಡುವಿನ ರಸ್ತೆಯ ಹಲವೆಡೆಗಳಲ್ಲಿ ಬರೆ ಕುಸಿತದೊಂದಿಗೆ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.
ಭಾಗಮಂಡಲ-ಕರಿಕೆ ರಸ್ತೆ ನೆರೆಯ ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆಯೂ ಆಗಿದ್ದು, ಬರೆ ಹಾಗೂ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.







