ನಾಪೋಕ್ಲು ಜು.29 : ಲಯನ್ಸ್ ಸಂಸ್ಥೆ ನಾಪೋಕ್ಲು ಮತ್ತು ಲಿಯೋ ಸಂಸ್ಥೆಯ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಕೇಟೋಳಿರ ಡಾಲಿ ಅಚ್ಚಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಹಾಗೂ ಕೊವೀಡ್ ಸಂದರ್ಭದಲ್ಲಿ ಮೂವತ್ತಕ್ಕೂ ಅಧಿಕ ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಸಹಕರಿಸಿರುವುದಲ್ಲದೇ, ಕ್ರೀಡಾ ತರಬೇತಿದಾರರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘೀಸಿದರು.
ವೇದಿಕೆಯಲ್ಲಿದ್ದ ಗಣ್ಯರು ಮಾತನಾಡಿ ದೇಶಪ್ರೇಮ ಮತ್ತು ದಿನದ ಮಹತ್ವದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ರಾಜ್ಯಪಾಲ ಸಂಯೋಜಕ ಪಂಚಮ್ ತಿಮ್ಮಯ್ಯ, ಸೇವಾ ಸಂಯೋಜಕ ಮುಕ್ಕಾಟಿರ ವಿನಯ್, ಸದಸ್ಯರಾದ ರತ್ನಾ ಚರ್ಮಣ, ಲಿಯೋ ಸಂಸ್ಥೆಯ ಉಪಾಧ್ಯಕ್ಷ ಮಾದೆಯಂಡ ರೋಹನ್, ಕೇಟೋಳಿರ ಕುಟ್ಟಪ್ಪ, ಡಾ.ಬೋಪ್ಪಂಡ ಜಾಲಿ ಬೋಪಯ್ಯ, ಕುಂಚೆಟ್ಟಿರ ಸುಧಿ, ರೇಷ್ಮಾ, ಅಪ್ಪಾರಂಡ ಸುಭಾಷ್, ಲವ ಕಾಳಪ್ಪ, ಕಾಂಡಂಡ ಪೊನ್ನಣ್ಣ, ತಿಮ್ಮಯ್ಯ, ಮಂದಪಂಡ ಸತೀಶ್, ಖಜಾಂಚಿ ಬನ್ಸ್ ಭೀಮಯ್ಯ, ವಿನಿತಾ ತಿಮ್ಮಯ್ಯ, ಕಲಿಯಂಡ ಸಾಬು ಅಯ್ಯಣ್ಣ, ಬೊಪ್ಪೆರ ಜಯ ಹಾಜರಿದ್ದರು.
ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿದರು. ಕಾಡಂಡ ರೇಖಾ ಪೊನ್ನಣ್ಣ ಅತಿಥಿಗಳ ಪರಿಚಯ ಮಾಡಿದರು. ಮಾದೆಯಂಡ ರೋಹನ್ ಮಾಚಯ್ಯ ಧ್ವಜ ವಂದನೆ ನೆರವೇರಿಸಿದರು. ಕನ್ನಂಬಿರ ಸುಧಿ ತಿಮ್ಮಯ್ಯ ಸರ್ವರನ್ನು ಸ್ವಾಗತಿಸಿದರು. ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅತಿಥಿಗಳ ಬಗ್ಗೆ ಮಾತನಾಡಿ ಮಾದೆಯಂಡ ಕುಟ್ಟಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ