ಮಡಿಕೇರಿ ಜು.30 : ಸುಮಾರು 20 ವರ್ಷದ ಗಂಡು ಕಾಡಾನೆಯೊಂದು ತೋಟದಲ್ಲಿ ಸತ್ತು ಬಿದ್ದಿರುವ ಘಟನೆ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿಯೇ ಈ ಘಟನೆ ನಡೆದಿದ್ದು, ತಡವಾಗಿ ಕಾಡಾನೆಯ ದೇಹ ಗೋಚರಿಸಿದೆ. ವಿದ್ಯುತ್ ಸ್ಪರ್ಷದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಬೇಲಿಗೆ ಬಳಸುವ ಮುಳ್ಳು ತಂತಿಯ ಉರುಳು ಕುತ್ತಿಗೆಯಲ್ಲಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್ ಶ್ವಾನದಳ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಪಶುವೈದ್ಯ ಡಾ.ಚಿಟ್ಟಿಯಪ್ಪ ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.











