ಮಡಿಕೇರಿ ಆ.6 : ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ವತಿಯಿಂದ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಕಕ್ಕಡ ಪದಿನಟ್ಟ್ ಆಚರಿಸಲಾಯಿತು.
ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ನಮ್ಮ ಹಬ್ಬಗಳೆಲ್ಲವೂ ಕೃಷಿ ಆಧಾರಿತವಾಗಿದೆ. ಯುವ ಸಮೂಹ ಕೃಷಿಯತ್ತ ಚಿತ್ತಹರಿಸಿ ರಾಷ್ಟçದ ಆಹಾರ ಭದ್ರತೆಯನ್ನು ಗಟ್ಟಿಗೊಳಿಸಬೇಕು, ನಮ್ಮ ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಕಕ್ಕಡ ಪದಿನಟ್ಟ್ ರ ವಿಶೇಷ ಖಾದ್ಯಗಳನ್ನು ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚoಡ ಕಟ್ಟಿ ಕಾವೇರಪ್ಪ. ನಿರ್ದೇಶಕರುಗಳಾದ ಪಡಿಞರಂಡ ಪ್ರಭುಕುಮಾರ್, ಮೂರೀರ ಕುಶಾಲಪ್ಪ, ಕೊಂಗೆಪoಡ ರಘ, ಪಂದಿಕoಡ ಸುನಾ, ಮಲ್ಲಾಡ ಸುತಾ, ಮೂರೀರ ಶಾಂತಿ, ಪದಿಕಂಡ ನಾಗೇಶ್, ಪ್ರಮುಖರಾದ ಮೂರೀರ ಪಾರ್ವತಿ, ಮಲ್ಲಾಡ ಕಟ್ಟಿ ಪೂಣಚ್ಚ, ಪಡಿಞರಂಡ ಗೀತಾ, ಕವಿತಾ, ಕೊರಕುಟ್ಟೀರ ಯಶೋಧ ಮತ್ತಿತರರು ಉಪಸ್ಥಿತರಿದ್ದರು.









