ಸೋಮವಾರಪೇಟೆ ಆ.12 : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ (ರಿ), ಕೊಡಗು ಜಿಲ್ಲೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನಡೆಯಿತು.
ಜಿಲ್ಲಾ ಅಧ್ಯಕ್ಷರಾಗಿ ಹೆಚ್.ಎಂ.ದಿವಾಕರ್ ಪ್ರಧಾನ ಕಾರ್ಯದರ್ಶಿ ದಯಾನಂದ, ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಕುಮಾರ್, ಖಜಾಂಚಿ ಯು.ಪಿ.ನಾಗೇಶ್ . ಪ್ರಧಾನ ಸಂಚಾಲಕರಾಗಿ ಬಿ.ಕೆ.ಯತೀಶ್ ತಾಲ್ಲೂಕುವಾರು ಉಪಾಧ್ಯಕ್ಷರಾಗಿ ಸಿ.ವಿ..ಶಂಭುಲಿಂಗಪ್ಪ, ಡಿ.ಎಸ್. ಮಹೇಶ್ , ಶನಿವಾರಸಂತೆ ಡಿ.ಎನ್.ವಿಕ್ರಂ, ಬಡುಬನಹಳ್ಳಿ ಬಸಪ್ಪ ಸೋಮವಾರಪೇಟೆ ಎಂ.ಎಂ. ಪ್ರಕಾಶ್ , ಹೆಚ್.ಸಿ. ಯತೀಶ್, ಕಾರ್ಯದರ್ಶಿಗಳಾಗಿ ಎಸ್.ವಿ.ಸಿದ್ದೇಶ್ . ಯು.ಹೆಚ್. ಉಮೇಶ್, ನಿರ್ದೇಶಕರು ಗುರುರಾಜ್, ಎಂ.ಸಿ.ಆದರ್ಶ, ಪಿ.ಎನ್ ರವಿ, ಇಂದುಶೇಖರ್, ಕೆ.ಪಿ.ಮುತ್ತಯ್ಯ, ಮೊಹನ್, ವಿ.ಹರೀಶ್, ಪ್ರಥಾಪ್.ಸಿ.ಟಿ ಜಗದೀಶ್, ಗಿರೀಶ್ ಲಕ್ನಿ ಇವರುಗಳನ್ನು ಆಯ್ಕೆ ಮಾಡಲಾಯಿತು ಹಾಗು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಸಭೆಯ ದಿವ್ಯ ಸಾನಿದ್ಯದಲ್ಲಿ ಗೌರವಾಧ್ಯಕ್ಷರಾದ ಮನೆಹಳ್ಳಿ ಮಠಾಧ್ಯರು ಶ್ರೀ ಶ್ರೀ ಶಿವಲಿಂಗಸ್ವಾಮೀಜಿ, ಕಲ್ಲುಮಠಾಧ್ಯಕ್ಷರು ಶ್ರೀ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಹಳ್ಳಿ ಮಠಾಧ್ಯಕ್ಷರು ಶ್ರೀ ಶ್ರೀ ರುದ್ರಮುನಿ ಮಾಹಾ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಾಸ್ಥಾವಿಕ ನುಡಿಯಲ್ಲಿ ರಾಷ್ಟ್ರೀಯ ಸಂಚಾಲಕರಾದ ಶ್ರೀ ಎಸ್ ಮಹೇಶ್ ಮಾತನಾಡಿ ನಮ್ಮ ಸಂಘ ರಾಷ್ಟೀಯ ಮಟ್ಟದಲ್ಲಿ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡು ಉತ್ತಮ ಸಂಘಟನೆಯಾಗಿದೆ. ಒಬಿಸಿ ಪಂಗಡಕ್ಕೆ ಸಿಗುವ ಸರ್ಕಾರದ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗುತ್ತಿಲ್ಲ. ಹಿಂದಿನ ವರ್ಷದ ಸರ್ಕಾರ ವೀರಶೈವರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ನಿಗಮದಿಂದ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ , ರೈತರ ಕೃಷಿ ಕೊಳಬೆ ಬಾವಿ ಮುಂತಾದ ಸಾಲ ಸೌಲಭ್ಯ ನಿಗಮದಿಂದ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವಂತೆ ತಿದ್ದುಪಡಿಯನ್ನು ಮಾಡಬೇಕಾಗಿದೆ.
ನಮ್ಮ ಸಂಘಟನೆ ರಾಜ್ಯದ 31 ಜಿಲ್ಲೆಯಲ್ಲಿ ಮಹಿಳಾ ಘಟಕವು ಸೇರಿದಂತೆ ಒಟ್ಟು 43 ವಿವಿಧ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಕೊಡಗಿನ ರಾಜರ ಅರಮನೆ ದುರಸ್ತಿ ಕಾರ್ಯ ನಡೆಯುತ್ತಿದೆ ಅಂತೆಯೇ ರಾಜರ ಗದ್ದುಗೆ ದುರಸ್ತಿ ನಡೆಬೇಕಿದೆ, ಒಟ್ಟು 19 ಎಕರೆ ಗದ್ದುಗೆ ಜಾಗವು ಆಕ್ರಮವಾಗಿ ಸಾರ್ವಜನಿಕರು ಆಕ್ರಮಿಸಿಕೊಂಡು ಈಗ ಕೇವಲ 2ಎಕರೆ ಜಾಗ ಉಳಿದಿದೆ… ಮೂಲಭೂತ ಸೌಕರ್ಯಗಳೊಂದಿಗೆ.. ಮನೆಗಳು ನಿರ್ಮಾಣ ವಾಗಿವೆ.. ಮೂಲನಿವಾಸಿಗಳೆಂದು ಆಕ್ರಮಿಸಿಕೊಂಡಿದ್ದಾರೆ.. 300 ವರ್ಷಗಳ ಕಾಲ ಕೊಡಗನ್ನು ಆಳಿದ ರಾಜರ ಪ್ರತಿಮೆ ಕೊಡಗಿನಲ್ಲಿಲ್ಲ, ಬಸವೇಶ್ವರ ವಂಶದ ಅನುಭವ ಮಂಟಪ ಇಂದು ಫೀರ್ಬಾಷ ಬಂಗಲೆಹಿಡಿತದಲ್ಲಿದೆ ನಮ್ಮ ಸಮಾಜವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ.
ಕೊಡಗಿನಲ್ಲಿ 30 ಮಠಗಳಿದ್ದು ಇಂದು 11 ಮಠಗಳಿವೆ ಅಳಿಯುತ್ತಿವೆ ಈ ಎಲ್ಲಾ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸಂಘದ ಮೂಲಖ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದರು.
ಕಲ್ಲು ಮಠಾಧ್ಯಕ್ಷ ಶ್ರೀ ಶ್ರೀ ಮಹಾಂತ ಸ್ವಾಮಿಗಳು ಮಾತನಾಡಿ ಅಭಿಪ್ರಾಯ ಬಿನ್ನಾಬಿಪ್ರಾಯಗಳು ಎಲ್ಲಾ ದರ್ಮಗಳಲ್ಲಿ ಇವೆ.. ಸಮಾಜ ಬಾಂದವರು ಕುಂದು ಕೊರತೆಗಳು ಗಳು ಬಂದಲ್ಲಿ ಸಮಾಜ ದಲ್ಲಿ ಒಗ್ಗೂಡಿಸುವ ಮೂಲಕ ಸಮಾಜ ಸುದಾರಣೆಮಾಡಬೇಕಾಗಿದೆ ಎಂದರು.
ಮನೆಹಳ್ಳಿ ತಪೋಕ್ಷೇತ್ರ ಮಠಾಧ್ಯಕ್ಷ ಶ್ರೀ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ ಸಂಘಟನೆ ಎಂಬುದು ಬೃಹತ್ ವೃಕ್ಷವಿದ್ದಂತೆ ನಮ್ಮ ಸಮಾಜದ ವೃಕ್ಷ ಬಸವೇಶ್ವರರು ಅವರ ತತ್ವ ಸಿದ್ದಾಂತಕ್ಕೆ ಆಕರ್ಷಿತರಾಗಿ ಜಮ್ಮು ಕಾಶ್ಮೀರದ ರಾಜ ಮಹದೇ ಬೂಪಾಲ್ ಅನುನಾಯಿಯಾಗಿದ್ದರು ಹಾಗಾಗಿ ಸಂಘಟನೆ ಅಂತವಹ ಹಾದಿಯನ್ನು ಅನುಸರಿಸಬೇಕು. ಕಳೆದ 4 ವರ್ಷಗಳಿಂದ ಈ ಸಂಘಟನೆಯ ಪ್ರಮುಕ ಕಾರ್ಯಕ್ರಮ ಶ್ರೀ ವೀರಭದ್ರೇಶ್ವರ ವರ್ದಂತಿ ಉತ್ಸವವನ್ನು ಹಾಗು ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರಪಂಚದಾದ್ಯಂತ ಆಚರಣೆ ಮಾಡಿಕೊಂಡು ಬರುತ್ತಿದೆ ಅಂತೆಯೇ ಜಿಲ್ಲಾ ಮಟ್ಟದ ಕಾರ್ಯಕ್ರಮ ವಾಗಿ ಮನೆಹಳ್ಳಿ ತಪೋಕ್ಷೇತ್ರದಲ್ಲಿ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷ ಅಕ್ಟೋಬರ್ 1ನೇ ತಾರೀಕಿನಂದ ಆಚರಿಸಲು ನಿಗದಿಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಸಂಚಾಲಕರಾದ ಎ.ಎಸ್. ಮಲ್ಲೇಶ್ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಜಿ.ಬಿ.ಜಯರಾಜ್, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಪ್ರಸನ್ನ ಹಿರಿಯರಾದ ಕೆ.ಬಿ.ನಾಗರಾಜ್ ಇದ್ದರು.
ಜಿಲ್ಲೆಯಾದ್ಯಂತ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.