ಮಡಿಕೇರಿ, ಆ.14 : ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನಗದು ಸೌಲಭ್ಯವನ್ನು ವರ್ಗಾವಣೆ ಮಾಡುವ ಪ್ರಯುಕ್ತ ಆ.17 ರಂದು ಕುಶಾಲನಗರ ಪುರಸಭೆ ವ್ಯಾಪ್ತಿಯ 1 ನೇ ಬ್ಲಾಕ್ ಕಾವೇರಿ ಬಡಾವಣೆಯಲ್ಲಿರುವ ಕಾವೇರಿ ಕಲಾಭವನ, 1ನೇ ಬ್ಲಾಕ್ ಇಂದಿರಾ ಬಡಾವಣೆಯಲ್ಲಿರುವ ದಾರೂಲ್ ಉಲುಂ ಸಮುದಾಯ ಭವನ, 3ನೇ ಬ್ಲಾಕ್ ತ್ಯಾಗರಾಜ ರಸ್ತೆಯಲ್ಲಿರುವ ಗಾಯತ್ರಿ ಕಲ್ಯಾಣ ಮಂಟಪ, 4 ನೇ ಬ್ಲಾಕ್‍ನಲ್ಲಿರುವ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ಆದ್ದರಿಂದ ಕುಶಾಲನಗರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.







