ವಿರಾಜಪೇಟೆ ಆ.15 : ವಿರಾಜಪೇಟೆಯ ಮಲೆಮಹದೇಶ್ವ ಬೆಟ್ಟದಲ್ಲಿನ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ಶ್ರಾವಣ ಮಹೋತ್ಸವವನ್ನು ಈ ವರ್ಷವೂ ಆ.19 ರಿಂದ ಸೆ.9 ವರೆಗೆ ಸಕಲ ಪೂಜ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುವುದು ಎಂದು ಸೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ವ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದ್ದಾರೆ. ಶ್ರಾವಣ ಪೂಜೋತ್ಸೋವದ ನಿಮಿತ್ತ ಆ.18 ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ನಡೆಯಲಿದ್ದು ಪ್ರತಿ ಶನಿವಾರ ಬೆಳಿಗ್ಗೆ 6 ಗಂಟೆಗೆ ಅಭಿಷೇಕ, 7 ಗಂಟೆಗೆ ಅಲಂಕಾರ 8. ಗಂಟೆಗೆ ನವಗ್ರಹ ಪೂಜೆ, 11.00 ಗಂಟೆಗೆ ದೇವರ ದರ್ಶನ ಮಧ್ಯಾಹ್ನ 12 ಗಂಟೆ ಮಹಾ ಪೂಜೆ, ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಪ್ರತಿ ಶುಕ್ರವಾರ ಸಂಜೆ 7.30 ಗಂಟೆಗೆ ಶ್ರೀ ದುರ್ಗಾದೇವಿ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ.








