ನಾಪೋಕ್ಲು ಆ.19 : ಬೈನೆ ಮರದ ಕಾಯಿಗಳನ್ನು ಕೀಳಲು ಬಂದ ಕೇರಳದ ಅಪರಿಚಿತ ನಾಲ್ವರನ್ನು ದೊಡ್ಡಪುಲಿಕೋಟು ಗ್ರಾಮಸ್ಥರು ವಿಚಾರಣೆ ಒಳಪಡಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪುಲಿಕೋಟು ವ್ಯಾಪ್ತಿಯಲ್ಲಿ ಬೈನೆ ಮರದ ಬೀಜ ಸಂಗ್ರಹಿಸಲು ಅಯ್ಯಂಗೇರಿ ಗ್ರಾಮದ ನಿವಾಸಿ ಕುಂಞಬ್ದುಲ್ಲ ಹಾಗೂ ಕೊಡ್ಲಿಪೇಟೆಯ ದಾವೂದ್ ಅವರ ಜೊತೆ
ಕೇರಳದ ವಯನಾಡು ಮತ್ತು ಮಾನಂದವಾಡಿ ಕಾರ್ಮಿಕರು ಬಂದು ಸ್ಥಳೀಯ ರೈತರನ್ನು ಸಂಪರ್ಕಿಸಿದ ಸಂದರ್ಭ ಪುಲಿಕೋಟು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮತ್ತು ಇತರರು ಈ ಬಗ್ಗೆ ಪ್ರಶ್ನಿಸಿದ್ದಾರೆ.
ಕೊಡಗಿನ ವಿವಿಧ ಭಾಗಗಳಿಂದ ಬೈನೆ ಮರದ ಕಾಯಿಗಳನ್ನು ರೈತರಿಂದ ಸಂಗ್ರಹಿಸಿ ಕೇರಳಕ್ಕೆ ತೆಗೆದುಕೊಂಡು ಹೋಗಿ ಒಣಗಿಸಿ ಬಳಿಕ ವಿವಿಧ ಉತ್ಪನ್ನಗಳೊಂದಿಗೆ ಮಾರಾಟ ಮಾಡಲಿರುವುದಾಗಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಂದು ನಾಣಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಈ ಸಂದರ್ಭ ಬಲ್ಲಮಾವಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಚಂಗಪ್ಪ, ಕರವಂಡ ಅಪ್ಪಣ್ಣ, ಮಾಚಯ್ಯ, ಸುರೇಶ್, ಬೆಳ್ಳಿಯಪ್ಪ, ಪೆಬ್ಬೆಟ್ಟಿರ ಯತೀಶ್ ಇನ್ನಿತರದಿದ್ದರು.
ವರದಿ : ದುಗ್ಗಳ ಸದಾನಂದ