ವಿರಾಜಪೇಟೆ ಆ.26 : ಬೆಂಗಳೂರಿನ ವಿಶ್ವ ಕಲಾ ಸಂಸ್ಥೆ ವತಿಯಿಂದ ಹೆಬ್ಬಾಳದ ಅಲುಮ್ನಿ ಅಸೋಷಿಯೇಷನ್ ಸಭಾಂಗಣದಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನ, ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ, ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರಿಗೆ ವಿಶ್ವ ಕಲಾ ಶ್ರೀ ಲೋಕೇಶ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಟಿಯಾನ, ಭುವನ, ಚಿನ್ಮಯ್, ತಾನ್ಸಿ ತಂಗಮ್ಮ, ನೌಶಿದ, ವರ್ಷಿತ, ಶ್ರಿದೇವಿ, ಲಕ್ಷ, ಲಾವಣ್ಯ, ತೇಜಸ್ವಿನಿ, ಶಿವಾನಿ, ಶ್ರೇಯಾ ಸೋಮಣ್ಣ ಅವರುಗಳನ್ನು ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.









