ಮಡಿಕೇರಿ ಸೆ.1 : ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾಗುವ ಪ್ರತಿಷ್ಟಿತ ನೇಷನ್ ಬಿಲ್ಡರ್ ಪ್ರಶಸ್ತಿಗೆ ಈ ಬಾರಿ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಮಡಿಕೇರಿ ರೋಟರಿ ಸಭಾಂಗಣದಲ್ಲಿ ಸೆ.5 ರಂದು ಸಂಜೆ 7 ಗಂಟೆಗೆ ನಡೆಯುವ ಗುರು ನಮನ ಹೆಸರಿನ ಸಮಾರಂಭದಲ್ಲಿ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಪ್ರಧಾನ ಮಾಡಲಿದ್ದಾರೆ.
ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿರುವ ಶಿಕ್ಷಣ ಕ್ಷೇತ್ರದಲ್ಲಿ 50 ವಷ೯ಗಳಿಗೂ ಮಿಕ್ಕಿ ಸಾಧನೆ ಮಾಡಿರುವ ಮೇರಿಫಾತಿಮಾ, ನಿವೃತ್ತ ಶಿಕ್ಷಕಿ ಮಡಿಕೇರಿಯ ದೇವಕಿ, ಭಾಗಮಂಡಲದ
ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಶ್ರೀಕೖಷ್ಣ ಭಟ್, ಮಡಿಕೇರಿಯ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಕೆ.ಸರಸ್ವತಿ, ಮಡಿಕೇರಿ ಸಂತಮೈಖಲರ ಶಾಲೆಯ ದೈಹಿಕ ಶಿಕ್ಷಕಿ ಸಗಯ ಮೇರಿ ಅವರು ಈ ವಷ೯ ರೋಟರಿ ಮಿಸ್ಟಿ ಹಿಲ್ಸ್ ನ ನೇಷನ್ ಬಿಲ್ಡರ್ ಪ್ರಶಸ್ತಿ ಪಡೆಯಲಿದ್ದಾರೆ.
ಕಾಯ೯ಕ್ರಮದಲ್ಲಿ ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ಪಾಲ್ಗೊಳ್ಳಲಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ತಿಳಿಸಿದ್ದಾರೆ.