ಸೋಮವಾರಪೇಟೆ ಸೆ.1 : ಜೇಸಿಐ ಕಳಶದ ವತಿಯಿಂದ ಮಹಾವೀರ ಭವನದಲ್ಲಿ ನಡೆದ ಗ್ರೋತ್ ಅಂಡ್ ಡೆವಲಪ್’ಮೆಂಟ್ ಸಮ್ಮೇಳನದಲ್ಲಿ ಸೋಮವಾರಪೇಟೆ ಜೇಸಿ ಅಧ್ಯಕ್ಷೆ ವಲಯ 14ರ ಅಧ್ಯಕ್ಷೆ ಎಂ.ಎ.ರುಬೀನಾ ಗೆ ಮಹಿಳಾ ಸಾಧನ ಸಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಮಾಡಿ, ಹೆಚ್ಚಿನ ಅಂಕ ಪಡೆದ ಮೊದಲ ಹತ್ತು ಘಟಕಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಗಿದ್ದು, ಇದರಲ್ಲಿ ಸೋಮವಾರಪೇಟೆ ಜೇಸಿ ಸಂಸ್ಥೆ ಆರನೇ ಸ್ಥಾನ ಪಡೆಯಿತು. ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಅವರಿಂದ ಪ್ರಶಸ್ತಿಯನ್ನು ಅಧ್ಯಕ್ಷೆ ರುಬೀನಾ ಮತ್ತು ತಂಡ ಪಡೆದುಕೊಂಡರು.
ಜೆಸಿಐ ಎಕ್ಸಲೆಂಟ್ ಅಚ್ಯೂಮೆಂಟ್, ಎಕ್ಸ್‍ಟೆಂಡಿಂಗ್ ನ್ಯೂ ಲೋಕಲ್ ಆರ್ಗನೈಸೇಷನ್ ಮತ್ತು ಪ್ರತಿಭಾ ಅನ್ವೇಷಣಾ ಪರೀಕ್ಷೆಗೆ ವಿಶೇಷ ಮನ್ನಣೆಯನ್ನು ಸೋಮವಾರಪೇಟೆ ಘಟಕ ಪಡೆದುಕೊಂಡಿದೆ ಎಂದು ರುಬಿನಾ ತಿಳಿಸಿದ್ದಾರೆ.
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ.ಭೀಮೇಶ್ವರ ಜೋಷಿ, ವಲಯ ಉಪಾಧ್ಯಕ್ಷರುಗಳಾದ ಎಚ್.ಆರ್.ಪ್ರಶಾಂತ, ಕೆ.ಡಿ.ಪ್ರಶಾಂತ್, ಕಳಶ ಘಟಕದ ಅಧ್ಯಕ್ಷ ಚರಣ್ ಇದ್ದರು.







