ಮಡಿಕೇರಿ ಸೆ.3 : ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ನಗರದ ಸಂತ ಜೋಸೆಫರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿಸ್ಟರ್ ರೋಜಾ ಕರೆ ನೀಡಿದರು.
ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡ ಫಿಸಿಕ್ಸ್ ಫೆಸ್ಟ್ ಅನ್ನು ಸಿಸ್ಟರ್ ರೋಜಾ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ದರು. ಈ ಸಂದಭ೯ ಮಾತನಾಡಿದ ಅವರು, ಭೌತಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಫಿಸಿಕ್ಸ್ ಫೆಸ್ಟ್ ಸಹಕಾರಿ ಎಂದು ಅಭಿಪ್ರಾಯಪಟ್ಟರು,
ವಿದ್ಯಾ ಸಂಸ್ಥೆಯ ಸಂಚಾಲಕಿ ಸಿಸ್ಟರ್ ಲೂರ್ದ್ ಮೇರಿ, ಸಿಸ್ಟರ್ ರೆಜಿನಾ ಮಿರಾಂಡ, ಸಿಸ್ಟರ್ ಫಿಲೋಮಿನಾ, ಮೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಾಲತಿ ವೇದಿಕೆಯಲ್ಲಿದ್ದರು.
ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಚೈತ್ರ ಎಂ ಸಿ ಮಾರ್ಗದರ್ಶನದಲ್ಲಿ ನ್ಯೂಕ್ಲಿಯರ್ ಎಕ್ಸ್ಪೋಜನ್, ಡಿಮ್ -ಡಿಪ್ ಲೈಟ್ ಸೆನ್ಸರ್, ಸ್ಪೇಸ್ ಶೆಟಲ್, ಇಲೆಕ್ಟ್ರೋ ಮ್ಯಾಗ್ನೆಟಿಕ್ ಕ್ರೇನ್.. ಮೊದಲಾದ ಆಕರ್ಷಕ ವರ್ಕಿಂಗ್ ಮಾಡೆಲ್ ಗಳನ್ನು ತಯಾರಿಸಿದ ಪ್ರಥಮ ಹಾಗೂ ದ್ವಿತೀಯ ಪಿ ಯು ಸಿ ಯ ವಿಜ್ಞಾನ ವಿಭಾಗದ ವಿದ್ಯಾಥಿ೯ಗಳು 20 ತಂಡಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದರು.
ಸಂಸ್ಥೆಯ ಹಿರಿಯ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗವನ್ನೂ ಒಳಗೊಂಡಂತೆ ಎಲ್ಲ ಮಕ್ಕಳೂ ವಿಜ್ಞಾನದ ಮಾದರಿಗಳನ್ನು ಬೆರಗುಗಣ್ಣಿನಿಂದ ನೋಡಿದರು.
ಮೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಮಾಲತಿ, ಸಂತ ಜೋಸೆಫರ ಪ್ರೌಢಶಾಲಾ ಶಿಕ್ಷಕಿಯರಾದ ಗ್ರೇಸಿ ಲೋಬೋ, ಶಾರದಾ ಹಾಗೂ ರಮಿತ ತೀರ್ಪುಗಾರರಾಗಿದ್ದರು. ವಿದ್ಯಾರ್ಥಿ ಹಬೀಬುಲ್ ಬಷರ್ ನಿರೂಪಿಸಿದರು.