ಮಡಿಕೇರಿ, NEWS DESK ಮಾ.5 : ವ್ಯಕ್ತಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆ ರಸ್ತೆಯಲ್ಲಿ ನಡೆದಿದೆ.
ಗುತ್ತಿಗೆದಾರ ಅಮೆಮನೆ ದೇವಿ ಪ್ರಸಾದ್(43) ಮೃತ ವ್ಯಕ್ತಿಯಾಗಿದ್ದಾರೆ. ಒಂಟಿ ನಳಿಕೆ ಬಂದೂಕು ಸಹಿತ ಮನೆಯಿಂದ ಹೊರ ಬಂದ ದೇವಿ ಪ್ರಸಾದ್ ರಸ್ತೆ ಬದಿಯಲ್ಲೇ ಎದೆಯ ಭಾಗಕ್ಕೆ ಗುಂಡು ಹೊಡೆದುಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅನಾರೋಗ್ಯ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಮಡಿಕೇರಿ ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಠಾಣಾಧಿಕಾರಿ ಅನ್ನಪೂರ್ಣ, ಸಿಬ್ಬಂದಿಗಳು ಹಾಗೂ ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಘಟನೆ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Breaking News
- *ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್*
- *ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ; ಸ್ವಯಂ ಸೇವೆ ಎಂಬುದು ಎಂದಿಗೂ ಮುಗಿಯದ ನಿರಂತರ ಪ್ರಕ್ರಿಯೆ: ಮಾರ್ಚಂಡ ಗಣೇಶ್ ಪೊನ್ನಪ್ಪ*
- *ವಿಪತ್ತು ನಿರ್ವಹಣೆಯ ತರಬೇತಿ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ: ರೆ. ಫಾ. ಮದಲೈ ಮುತ್ತು*
- *ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ : ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ*
- *ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಿರಸ್ಕಾರ*
- *ದೊಡ್ಡಮಳ್ತೆ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ*
- *ಬೆಟ್ಟದಳ್ಳಿ, ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ನಿರ್ಣಯ*
- *ಕುಶಾಲನಗರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ*
- *ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ*
- *ಸುಂಟಿಕೊಪ್ಪದಲ್ಲಿ ಅದ್ಧೂರಿಯಾಗಿ 62ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ*







