ಕುಶಾಲನಗರ ಆ.4 : ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಪರಿಶೀಲನೆ ನಡೆಸಿದರು.
ಸುಂದರನಗರದ ಅಂಗನವಾಡಿ ಬಳಿ ಹದಿನೈದನೇ ಹಣಕಾಸಿನ ಅನುದಾನದಲ್ಲಿ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿದ ಕೆ.ಬಿ.ಶಂಶುದ್ಧೀನ್ ಗುಣಮಟ್ಟ ಕಾಪಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಸುಂದರನಗರ ಅಂಗನವಾಡಿ ಬಳಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ನಿಂತು ರೋಗ ಹರಡುವ ಭೀತಿ ಹೆಚ್ಚಾಗಿತ್ತು. ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಂಗನವಾಡಿ ಮಕ್ಕಳ ಮತ್ತು ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆ ನೀಡಿ, ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಈ ಸಂದರ್ಭ ಸುಂದರನಗರ ಗ್ರಾಮಾಸ್ಥರು ಇದ್ದರು.