ಮಡಿಕೇರಿ ಸೆ.17 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮೂರನೇ ದಿನದ ಪಾದಯಾತ್ರೆ ಮುತ್ತ್ನಾಡ್ ಮಂದ್ (ಕಾಲೂರು) ಮತ್ತು ಬದಿಗೇರಿ ನಾಡ್ ಮಂದ್ (ಮುಕ್ಕೋಡ್ಲು) ನಲ್ಲಿ ನಡೆಯಿತು.
ಕೊಡವ ಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಧಾನ ಬೇಡಿಕೆಗಳ ಕುರಿತು ಕೊಡವರು ಜಾಗೃತರಾಗಬೇಕು ಮತ್ತು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಹೋರಾಟ ಮುಂದುವರೆಯಲಿದೆ ಎಂದರು.
ಸೆ.18 ರಂದು ಬೆಳಗ್ಗೆ 10 ಗಂಟೆಗೆ ಸೂರ್ಲಬ್ಬಿ ನಾಡ್ ಮಂದ್ (ಸೂರ್ಲಬ್ಬಿ), ಮಧ್ಯಾಹ್ನ 2.30 ಗಂಟೆಗೆ ಗಡಿ ನಾಡ್ ಮಂದ್ (ಬಿಳಿಗೇರಿ-ಮಾದಾಪುರ), ಸೆ.19 ರಂದು ಬೆಳಗ್ಗೆ 10 ಗಂಟೆಗೆ ಪಾಲೇರಿ ನಾಡ್ ಮಂದ್ (ಪಾಲೇರಿ) ಮತ್ತು ಸಂಜೆ 4.30 ಗಂಟೆಗೆ ಮೂಡಗೇರಿ ನಾಡ್ ಮಂದ್ (ಕೆದಕಲ್) ನಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಪ್ರಮುಖರಾದ ಐಲಪಂಡ ಪುಷ್ಪಾ ಪೂವಮ್ಮ, ಚೋಳಪಂಡ ಜ್ಯೋತಿ, ಕಾರೆರ ತಾರ, ಕಾರೆರ ಯಮುನ, ಕಾರೆರ ಮುತ್ತಮ್ಮ, ಕಾರೆರ ಜೋಯಪ್ಪ, ಚೋಳಪಂಡ ನಾಣಯ್ಯ, ಕಾರೆರ ಕಾಳಪ್ಪ, ಕಾರೆರ ಪಳಂಗಪ್ಪ, ಕಾರೆರ ಗಣಪತಿ, ಕಾರೆರ ತಿಮ್ಮಯ್ಯ, ಐಲಪಂಡ ಪೊನ್ನಪ್ಪ, ಐಲಪಂಡ ಮಿಟ್ಟು ಉತ್ತಪ್ಪ, ಐಲಪಂಡ ತಿಮ್ಮಯ್ಯ, ಐಲಪಂಡ ದೊರೆ ದೇವಯ್ಯ, ಸಿದ್ದಂಡ ಬೋಪಯ್ಯ, ಪೊನ್ನಚೆಟ್ಟಿರ ಪೊನ್ನಪ್ಪ, ನಂದಿರ ಜೀವನ್, ಕೊಳುಮಾಡಂಡ ಪ್ರವೀಣ, ನೆರವಂಡ ಧನುಷ್, ಚಾಂಡಿರ ರಾಜ, ಹಂಚೆಟ್ಟೀರ ಮನು ಮುದ್ದಪ್ಪ, ಹಂಚೆಟ್ಟೀರ ನಯನ ಚಂಗಪ್ಪ, ಶಾಂತೆಯಂಡ ರವಿ ಕುಶಾಲಪ್ಪ, ನಾಪಂಡ ರವಿ ಕಾಳಪ್ಪ, ನಂದಿರ ನಂಜುಂಡ, ನಂದಿರ ಧರ್ಮರಾಯ, ನಂದಿರ ನಾಣಯ್ಯ, ನಂದಿರ ಚಿಣ್ಣಪ್ಪ, ಓಡಿಯಂಡ ಪೊನ್ನಪ್ಪ, ತಂಬುಕುತ್ತಿರ ಪೂವಯ್ಯ, ನಾಪಂಡ ಅಯ್ಯಪ್ಪ, ನಾಪಂಡ ಚೆಂಗಪ್ಪ, ಚೆನ್ನಪ್ಪಂಡ ತಿಮ್ಮಯ್ಯ, ಕನ್ನಿಕಂಡ ಪೂವಯ್ಯ, ಮಡ್ಲಂಡ ಸೋಮಣ್ಣ, ದೇವೆಯಂಡ ಮುದ್ದಪ್ಪ, ಶಾಂತೆಯಂಡ ಕಾರ್ಯಪ್ಪ, ದಿನೇಶ್, ಕಾಳಚಂಡ ಪಟ್ಟು ಕಾರ್ಯಪ್ಪ, ಮಡ್ಲಂಡ ದೇವಯ್ಯ, ಮಡ್ಲಂಡ ಲವ ಮತ್ತಿತರರು ಪಾದಯಾತ್ರೆ ಸಂದರ್ಭ ಹಾಜರಿದ್ದರು.
Breaking News
- *ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿಂದ ಗಣರಾಜ್ಯೋತ್ಸವ ಆಚರಣೆ*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರನ್ನು ಗೌರವಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಗಣತಂತ್ರ ಹಬ್ಬದ ಮೂಲಕ ನಮ್ಮ ದೇಶದ ಸಾಂವಿಧಾನಿಕ ಅನನ್ಯತೆಯನ್ನು ಸಾರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನದ ಆಶಯಗಳಿಗೆ ಬದ್ಧರಾಗಿರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*