ಮಡಿಕೇರಿ ಸೆ.17 : ಪಶ್ಚಿಮ ಬಂಗಾಳದ ಅಸನ್ ಸೋಲ್ ನಲ್ಲಿ ನಡೆದ 32ನೇ ಆಲ್ ಇಂಡಿಯಾ ಜಿ.ವಿ ಮೌಲಾಂಕರ್ ಶೂಟಿಂಗ್ ಚಾಂಪಿಯನ್ ಶಿಪ್ ನ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಗರದ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎನ್.ಆರ್ ವಿಭಾಗದಲ್ಲಿ ಭಾಗವಹಿಸಿ 16 ವರ್ಷದೊಳಗಿನ ಸಬ್ ಯೂತ್ ವಿಭಾಗದಲ್ಲಿ 4ನೇ ಸ್ಥಾನ ಮತ್ತು 19 ವರ್ಷದೊಳಗಿನ ಯೂತ್ ವಿಭಾಗದಲ್ಲಿ 5ನೇ ಸ್ಥಾನ ಗಳಿಸಿದ್ದರು.
ಧನ್ವಿ ಮರಗೋಡಿನ ಕೃಷಿಕ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.










