ಮಡಿಕೇರಿ ಸೆ.17 : ರಾಷ್ಟ್ರೀಯ ನಾಯಕರಾದ ಲಾಲ್ ಬಹುದೂರ್ ಶಾಸ್ತ್ರಿ ಅವರ ಅಮೃತಕಾಲದಲ್ಲಿ ಅವರ ಜೀವನ ಶೈಲಿ ಮತ್ತು ಪರಂಪರೆ ಎಂಬ ವಿಷಯದ ಕುರಿತು ನೆಹರು ಯುವ ಕೇಂದ್ರದ ಕಚೇರಿಯಲ್ಲಿ ವರ್ಚುವಲ್ ಮಾಧ್ಯಮದ ಮೂಲಕ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶಾಬೀಭ ಪ್ರಥಮ, ಅಕ್ಷತಾಶೆಟ್ಟಿ ದ್ವಿತೀಯ ಮತ್ತು ಕಾವ್ಯ ಶ್ರೀ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರಥಮ ಸ್ಥಾನ ಪಡೆದ ಶಾಬೀಭ ಅವರು ರಾಜ್ಯ ಮಟ್ಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 25 ಸ್ಪರ್ಧಿಗಳು ಸಂಸತ್ತು ಭವನದಲ್ಲಿ ಭಾಷಣ ಮಾಡಲು ಅವಕಾಶವನ್ನು ಪಡೆಯಲಿದ್ದಾರೆ.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ ಅವರ ನೇತೃತ್ವದಲ್ಲಿ ಸ್ಪರ್ಧೆ ನಡೆಯಿತು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ, ನೆಹರು ಯುವ ಕೇಂದ್ರದ ಸಿಬ್ಬಂದಿಗಳಾದ ದೀಪ್ತಿ ಹಾಗೂ ರಂಜಿತಾ ಉಪಸ್ಥಿತರಿದ್ದರು.










