ವಿರಾಜಪೇಟೆ ಸೆ.18 : ವಿರಾಜಪೇಟೆಯ ಐತಿಹಾಸಿಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ದ ಪ್ರದೇಶ ಗೌರಮ್ಮನ ಪಲ್ಲಕ್ಕಿ ನಗರ ಪ್ರದಕ್ಷಿಣೆ ಸೇವೆಯು ಶ್ರದ್ಧಾಭಕ್ತಿಯಿಂದ ನಡೆಯಿತು.
ವಿರಾಜಪೇಟೆ ನಗರದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಲ್ಲಿ ಶ್ರೀ ಬಸವೇಶ್ವರ ದೇವಾಲಯ ಪ್ರಧಾನ ಅರ್ಚಕ ಮೋಹನ್ ಭಟ್ ಅವರು ಅರ್ಚಕ ವೃಂದದವರಿಂದ ಕೆರೆಗೆ ಬಾಗಿನ ಅರ್ಪಿಸಿದರು.
ಈ ಬಾರಿ ಅಲಂಕಾರ ವಸ್ತುವಾದ ಕನ್ನಡಿ ದೊರಕಿರುವುದು ವಿಶೇಷ. ಕನ್ನಡಿಯು ಹೆಂಗಳೆಯರಿಗೆ ತನ್ನ ಸೌಂದರ್ಯ ಪ್ರಜ್ಞೆ ತೊರುವ ದರ್ಪಣವಾದರು. ಹೊಸತು ಎಂಬುದನ್ನು ಬಿಂಬಿಸಲಾಗುತ್ತದೆ ಎಂದು ಪ್ರಧಾನ ಅರ್ಚಕರು ಹೇಳಿದರು.
ಪ್ರದೇಶ ಗೌರಮ್ಮನ ಪಲ್ಲಕ್ಕಿ ಸೇವೆಗೆ ಪಂಚವಾದ್ಯವು ಸಾತ್ ನೀಡಿತು. ನಗರದ ತೆಲುಗರ ಬೀದಿ ಯಿಂದ ಆರಂಭವಾದ ಪಲ್ಲಕ್ಕಿ ಉತ್ಸವವು ಸಂಜೆಯ ವೇಳೆಗೆ ನಗರದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಸುಮಂಗಲಿಯರಿಂದ ವಿಶೇಷ ಪೂಜೆಗಳನ್ನು ಪಡೆದು ಶ್ರೀ ಬಸವೇಶ್ವರ ದೇವಾಲಯಕ್ಕೆ ಆಗಮಿಸಲಿದೆ. ಬಳಿಕ ಪ್ರದೇಶ ಗೌರಮ್ಮನಿಗೆ ಮಾಹಾ ಪೂಜೆ ಸಲ್ಲಿಕೆಯಾಗಲಿದೆ.
ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕರು, ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








