ನಾಪೋಕ್ಲು ಸೆ.18 : ಮಡಿಕೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ನಗರದ ಸೆಂಟ್ ಮೈಕಲ್ ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು.
ಕ್ಲಸ್ಟರ್ ಗೆ ಒಳಪಡುವ 24 ಶಾಲೆಗಳ ಸುಮಾರು 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಸಿದ್ದರು. 47 ವಿಧದ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ನವೀನ್ ವಹಿಸಿದರು.
ಈ ಸಂದರ್ಭ ನಗರಸಭೆ ಸದಸ್ಯರಾದ ಬಾಳೆಯಡ ಸಬೀತಾ, ಸಂಪನ್ಮೂಲ ವ್ಯಕ್ತಿ ವೀಣಾ ರೈ, ಶಾಲಾ ಮುಖ್ಯಾಪಾಧ್ಯಾಯರು ಸೇರಿದಂತೆ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಪೋಷಕರು ಹಾಜರಿದ್ದರು.
6 ವರ್ಷಗಳಿಂದ ಪ್ರತಿಭಾಕಾರಂಜಿ ಮಾಡಲು ಸಹಕರಿಸಿದ ಮುಖ್ಯಶಿಕ್ಷಕರಾದ ಸಿಸ್ಟೆರ್ ಪ್ರತಿಮಾ ಅವರನ್ನು ಸನ್ಮಾನ ಮಾಡಲಾಯಿತು.
ವರದಿ : ದುಗ್ಗಳ ಸದಾನಂದ








