ಮಡಿಕೇರಿ ಸೆ.18 : ವಿದ್ಯಾರ್ಥಿ ಕಲಾಉತ್ಸವ 2023ರ ಪ್ರಬಂಧ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕ್ಷಮಾ ಕಾವೇರಮ್ಮ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ .
ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್. ವಿನೋದ್, ಶಾಲಾ ಸಂಯೋಜಕರಾದ ಚೈತ್ರ, ಭಾಗ್ಯ, ಅಮೃತ ಮತ್ತು ಶಿಕ್ಷಕ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










