ಮಡಿಕೇರಿ ಸೆ.19 : ಕೊಡವರು ತಮ್ಮ ತಾಯಿ ನೆಲದಲ್ಲೇ ಇಂದು ಅತಂತ್ರರು ಮತ್ತು ಅನಾಥರೂ ಆಗಿದ್ದು, ಕೊಡವರ ಹೆಗ್ಗುರುತು ಹಾಗೂ ಅಸ್ತಿತ್ವದ ಬಗ್ಗೆ ಭಯ ಕಾಡುತ್ತಿದೆ. ಆದ್ದರಿಂದ ಕೊಡವರಂತಹ ಸೂಕ್ಷ್ಮ ಬುಡಕಟ್ಟು ಜನಾಂಗದ ಬಗ್ಗೆ ವಿಶೇಷ ಕಾಳಜಿ ತೋರಿ ರಕ್ಷಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜ್ಯಾಂಗದತ್ತ ಋಣಭಾರವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಜಿಲ್ಲೆಯಾದ್ಯಂತ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ದಿನದ ಕೊಡವ ಜಾಗೃತಿ ಸಭೆ ಸೂರ್ಲಬಿ ನಾಡ್ ಮಂದ್, ಗಡಿನಾಡು ನಾಡ್ ಮಂದ್-ಬಿಳಿಗೇರಿ-ಮಾದಾಪುರದಲ್ಲಿ ನಡೆಯಿತು.
ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಸಂವಿಧಾನದ ವಿಧಿಗಳಡಿಯಲ್ಲಿ ಕೊಡವ ಸಮುದಾಯಕ್ಕೆ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಅತ್ಯಂತ ಶ್ರೇಷ್ಠ ಮತ್ತು ಸರ್ವ ಶಾಶ್ವತವೂ ಆಗಿರುವುದರಿಂದ ಸಂವಿಧಾನದಡಿಯಲ್ಲಿ ಕೊಡವರಂತಹ ಸೂಕ್ಷ್ಮ ಬುಡಕಟ್ಟು ಜನಾಂಗವನ್ನು ವಿಶೇಷವಾಗಿ ರಕ್ಷಿಸುವುದು ರಾಜ್ಯಾಂಗದತ್ತ ಋಣಭಾರವಾಗಿದೆ ಎಂದರು.
ಕೊಡವರು ಕೊಡವ ನೆಲದ ಪ್ರಾಚೀನ ಬುಡಕಟ್ಟು ಜನರಾಗಿದ್ದು, ಕೊಡವ ಮಂದ್ ಗಳು, ಜಲದೇವತೆ ಕಾವೇರಿ, ಸೂರ್ಯ, ಚಂದ್ರ, ಭೂಮಿತಾಯಿಯಷ್ಟೇ ಪವಿತ್ರವೂ ಆಗಿದ್ದಾರೆ. ನಮ್ಮ ಪಾದಯಾತ್ರೆಯಲ್ಲಿ ಬಳಸುತ್ತಿರುವ ಬ್ಯಾನರ್ ನಲ್ಲಿ ಭರತ ವರ್ಷದ ಪ್ರಾಚೀನ ಭೂಪಟವನ್ನು ಪ್ರದರ್ಶಿಸುತ್ತಿದ್ದೇವೆ. ಈ ಭೂಪಟದಲ್ಲಿ ಕ್ರಿಸ್ತಪೂರ್ವ ಎರಡು ಸಾವಿರ ವರ್ಷಗಳಿಗೂ ಮುನ್ನ ಕೊಡವರ ಅಸ್ತಿತ್ವ ಇದೆ ಎಂದು ಗುರುತು ಮಾಡಲಾಗಿದೆ. ಪ್ರಾಚೀನ ಬುಡಕಟ್ಟು ಕೊಡವ ಜನಾಂಗವನ್ನು ಈ ದೇಶದ ಜನ ಹಾಗೂ ಸರ್ಕಾರ ಸಂವಿಧಾನದ 51 ಎ.ಎಫ್ ವಿಧಿ ಮತ್ತು ವಿಶ್ವ ರಾಷ್ಟ್ರ ಸಂಸ್ಥೆಯ ಸನದ್ ನ ಪ್ರಕಾರ ರಕ್ಷಿಸಿ ಪೋಷಿಸಿ ಕಾಪಾಡಬೇಕಾಗಿದೆ ಎಂದು ತಿಳಿಸಿದರು.
ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮಾತ್ರ ಸೀಮಿತರಾಗಿ ಕಾಶ್ಮೀರದಲ್ಲಿ ತಾಯಿ ಬೇರನ್ನು ಹೊಂದಿದ್ದಾರೆ. ಕೊಡವರು ಕೂಡ ಕೊಡಗಿನ ಆದಿಮಸಂಜಾತರಾಗಿದ್ದು, ಕೊಡಗು ಹೊರತು ಪಡಿಸಿ ಕೊಡಗಿನ ಹೊರಗೆ ಕೊಡವರಿಗೆ ಎಲ್ಲೂ ತಾಯಿ ಬೇರಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವ ಬಾಹುಳ್ಯ ಜನ್ಮ ಭೂಮಿಯನ್ನು ಸಂವಿಧಾನದ 244 ವಿಧಿ ಹಾಗೂ 6 ಮತ್ತು 8 ನೇ ಶೆಡ್ಯೂಲ್ ಪ್ರಕಾರ ಕೊಡವರ ಸ್ವಯಂ ಶಾಸನದ ಜನ್ಮಭೂಮಿ ಎಂದು ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ಬೋಡೋ ಲ್ಯಾಂಡ್, ಕರ್ಬಿ ಹಾಂಗ್ ಲಾಂಗ್ ಲ್ಯಾಂಡ್, ಗಾರೊಲ್ಯಾಂಡ್, ಜಯಂತಿಯ ಲ್ಯಾಂಡ್, ಕಾಸಿ ಹಿಲ್ಸ್ ಲ್ಯಾಂಡ್ ಇತ್ಯಾದಿ ಭಾರತದ ಈಶಾನ್ಯ ರಾಜ್ಯಗಳ ಹತ್ತು ಸ್ವಾಯತ್ತ ಪ್ರದೇಶಗಳು ಮತ್ತು ಪರಿಷತ್ ಗಳು ಹಾಗೂ ಲಡಾಕ್ ನ ಲೇಹ್ ಮತ್ತು ಲಡಾಕ್ ಬುದ್ದಿಷ್ಠ್ ಅಟೋನಮಸ್ ಕೌನ್ಸಿಲ್ ಮಾದರಿಯಲ್ಲಿ ಘೋಷಿಸಿ ಶಾಸನಬದ್ಧಗೊಳಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಈ ಸಂಬoಧ ಸಿಎನ್‌ಸಿ ನಡೆಸುತ್ತಿರುವ ಯಾತ್ರೆಯು ಕೊಡವರನ್ನು ಅವರ ಹಕ್ಕುಗಳ ಕುರಿತು ಜಾಗೃತಿಗೊಳಿಸುವ ಮತ್ತು ಕೊಡವರ ಒಮ್ಮತದ ಅಭಿಪ್ರಾಯದ ಸಂದೇಶವನ್ನು ಸರ್ಕಾರಕ್ಕೆ ರವಾನಿಸುವ ಸಲುವಾಗಿದೆ. ಪ್ರತಿ ನಾಡಿನ ಮಂದ್ ಗಳಲ್ಲಿ ಭಕ್ತಿಪೂರ್ವಕ ನಮನ ಸಲ್ಲಿಸಿ ಅದರ ಮಹತ್ವವನ್ನು ದೇಶದ ಜನತೆ ಮತ್ತು ಸರ್ಕಾರಕ್ಕೆ ತಿಳಿಸಿ ವಿಶ್ವ ಜನತೆಯ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಪವಿತ್ರ ತೀರ್ಥಯಾತ್ರೆ ಕೈಗೊಂಡಿದ್ದೇವೆ ಎಂದರು.
ಸೂರ್ಲಬಿ ನಾಡ್ ಮಂದ್ ನಲ್ಲಿ ತಂಬುಕುತ್ತೀರ ರೇಖಾ ಸೋಮಯ್ಯ, ತಂಬುಕುತ್ತೀರ ಮಾಯಮ್ಮ ತಿಮ್ಮಯ್ಯ, ತಂಬುಕುತ್ತೀರ ಸೀತಮ್ಮ ಬೋಪಯ್ಯ, ಅಪ್ಪುಡ ಶಾಂತಿ ಅಯ್ಯಪ್ಪ, ಅಪ್ಪುಡ ಸುಬ್ಬಮ್ಮ ಮುತ್ತಣ್ಣ, ಒಡಿಯಂಡ ಮುದ್ದವ್ವ ಪೂವಯ್ಯ, ಒಡಿಯಂಡ ಶ್ರಾವಣಿ ಶಿವಕುಮಾರ್, ಮುದ್ದಂಡ ನೀಲಮ್ಮ ತಿಮ್ಮಯ್ಯ, ಮುದ್ದಂಡ ಚಿನ್ನಮ್ಮ ಮುದ್ದಪ್ಪ, ಮುದ್ದಂಡ ರಾಣಿ ಮುತ್ತಪ್ಪ, ಮುದ್ದಂಡ ಪೊನ್ನವ್ವ ನಾಣಿಯಪ್ಪ, ಮುದ್ದಂಡ ಗೌರಮ್ಮ ಸುಬ್ರಮಣಿ, ನಾಪಂಡ ಶೈಲಾ ಶಿವಕುಮಾರ್, ನಾಪಂಡ ಗೌರಮ್ಮ ಈಶ್ವರ್, ನಾಪಂಡ ಪ್ರಾಪ್ತಿ ಪೊನ್ನಮ್ಮ, ನಾಪಂಡ ಚಿರು ಚಿನ್ನಮ್ಮ, ನಾಪಂಡ ಪ್ರೀತಿ ಲೋಕೇಶ್, ನಾಪಂಡ ಚಂಗಪ್ಪ ಲೋಕೇಶ್, ಐಮುಡಿಯಂಡ ಪುಷ್ಪಾವತಿ ಮೋಹನ್, ತಂಬುಕುತ್ತೀರ ಸೋಮಯ್ಯ ಈರಪ್ಪ, ಅಪ್ಪುಡ ಉತ್ತಯ್ಯ ತಿಮ್ಮಯ್ಯ, ಓಡಿಯಂಡ ಶಿವಯ್ಯ ಪೂವಯ್ಯ, ಓಡಿಯಂಡ ಬೋಪಯ್ಯ ಗಣಪತಿ, ಮುದ್ದಂಡ ನಾಣಿಯಪ್ಪ ಅಚ್ಚಯ್ಯ, ಮುದ್ದಂಡ ಮಧು ಪಳಂಗಪ್ಪ, ಮುದ್ದಂಡ ತಿಮ್ಮಯ್ಯ ಸುಬ್ರಾಯ, ಮುದ್ದಂಡ ಗಪ್ಪು ಕುಟ್ಟಪ್ಪ, ಮುದ್ದಂಡ ಮುತ್ತಣ್ಣ, ಮುದ್ದಂಡ ತಿಮ್ಮಯ್ಯ ಬಿದ್ದಪ್ಪ, ನಾಪಂಡ ಅರುಣ ಪೂವಯ್ಯ, ನಾಪಂಡ ಸಾಬು ಸುಬ್ಬಯ್ಯ, ನಾಪಂಡ ಶಿವಕುಮಾರ್ ಈಶ್ವರ, ನಾಪಂಡ ದೊಡ್ಡಯ್ಯ ದೇವಯ್ಯ, ನಾಪಂಡ ದೇವಯ್ಯ ಗಣಪತಿ, ಮೊಣ್ಣಂಡ ದೊಡ್ಡಯ್ಯ ಬಿದ್ದಪ್ಪ, ಐಮುಡಿಯಂಡ ಕಾವೇರಿ ಕುಟ್ಟಪ್ಪ, ಮೇದುರ ಪೂವಯ್ಯ ತಿಮ್ಮಯ್ಯ, ಮೇದುರ ಕಂಠಿ ನಾಣಿಯಪ್ಪ, ಮೇದುರ ಕುಶಾಲಪ್ಪ, ಕನ್ನಿಕಂಡ ರಾಜ, ಕನ್ನಿಕಂಡ ತಿಮ್ಮಯ್ಯ, ಕನ್ನಿಕಂಡ ಸೋಮಯ್ಯ, ಕನ್ನಿಕಂಡ ಸೋಮಯ್ಯ, ಕನ್ನಿಕಂಡ ಕುಟ್ಟಪ್ಪ, ಕನ್ನಿಕಂಡ ಜೋಯಪ್ಪ, ತೆಕ್ಕೇರ ತಮ್ಮಯ್ಯ, ತೆಕ್ಕೇರ ತಿಮ್ಮಯ್ಯ, ಪುದಿಯತಂಡ ರವಿ ಅಪ್ಪಯ್ಯ, ಮಿನ್ನಂಡ ನೇತ್ರು, ಉದಿಯಂಡ ಸುರೇಶ್ ಪೊನ್ನಪ್ಪ, ಗಡಿನಾಡು ನಾಡ್ ಮಂದ್ ನಲ್ಲಿ ಬಾಚಿನಾಡಂಡ ಗೀತಾ ಬಿದ್ದಪ್ಪ, ಬಾಚಿನಾಡಂಡ ಗಿರೀಶ್ ಪೊನ್ನಪ್ಪ, ಬಾಚಿನಾಡಂಡ ಶಿಲ್ಪ ಅಕ್ಕಮ್ಮ, ಬಾಚಿನಾಡಂಡ ಅಚ್ಚಯ್ಯ, ಬಾಚಿನಾಡಂಡ ತಾರಾ ಅಚ್ಚಯ್ಯ, ಬಾಚಿನಾಡಂಡ ನಾಚಪ್ಪ, ಬಾಚಿನಾಡಂಡ ಕುಶಾಲಪ್ಪ, ಬಾಚಿನಾಡಂಡ ರೀಟಾ ಕುಶಾಲಪ್ಪ, ಬಾಚಿನಾಡಂಡ ಮೋಹನ್ ಬೋಪಣ್ಣ, ಬಾಚಿನಾಡಂಡ ಮಮತ ಬೋಪಣ್ಣ, ಬಾಚಿನಾಡಂಡ ಸೀಮಾ ಗಣಪತಿ, ಬಾಚಿನಾಡಂಡ ಗೊಂಬೆ ಚೆಂಗಪ್ಪ, ಬಾಚಿನಾಡಂಡ ಹೇಮನ್ ಕಾರ್ಯಪ್ಪ, ಬಾಚಿನಾಡಂಡ ಕವನ್ ಕಾರ್ಯಪ್ಪ, ಬಾಚಿನಾಡಂಡ ಸುಬ್ಬಯ್ಯ, ಬಾಚಿನಾಡಂಡ ರಮೇಶ್, ಬಾಚಿನಾಡಂಡ ಚೆಂಗಪ್ಪ, ಬಾಚಿನಾಡಂಡ ಪಾಪಣ್ಣ, ಬಾಚಿನಾಡಂಡ ಪೆಮ್ಮಯ್ಯ, ಬಾಚಿನಾಡಂಡ ಭೀಮಯ್ಯ, ಬಾಚಿನಾಡಂಡ ನಿರನ್, ಅಲ್ಲಚಂಡ ಹೇಮಾವತಿ ಭೀಮಯ್ಯ, ಅಲ್ಲಚಂಡ ಮಿಥುನ್ ಸೋಮಯ್ಯ, ಅಲ್ಲಚಂಡ ಮಿಲನ್ ಉತ್ತಯ್ಯ, ಅಲ್ಲಚಂಡ ಸುಬ್ರಮಣಿ, ಬೈರಾಜಂಡ ನಾಣಿಯಪ್ಪ, ಬೈರಾಜಂಡ ದರ್ಶನ್ ದೇವಯ್ಯ, ಮರುವಂಡ ಸುರೇಶ್ ಬೊಳ್ಳಿಯಪ್ಪ, ಮರುವಂಡ ದಿಕ್ಸನ್ ಬೊಳ್ಳಿಯಪ್ಪ, ಮರುವಂಡ ಬೋಪಣ್ಣ, ಮರುವಂಡ ಸುಬ್ಬಯ್ಯ, ಮರುವಂಡ ಪೊನ್ನಪ್ಪ, ಗೌಡಂಡ ಶರತ್ ಮುದ್ದಪ್ಪ, ನಾಗಂಡ ಶಿವನ್ ಮುದ್ದಪ್ಪ, ನಾಗಂಡ ಲವ ತಮ್ಮಯ್ಯ, ಚೋಳಪಂಡ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಕೂಪದಿರ ಸಾಬು ಸುಬ್ರಮಣಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.