ಮಡಿಕೇರಿ ಸೆ.19 : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಸಂಶೋಧಕರಾದ ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಕೆ.ಕೆ.ಮುತ್ತಮ್ಮ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಸಮಾಜ ಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.
ಕೊಡಗು ಜಿಲ್ಲೆಯ ಯರವ ಬುಡಕಟ್ಟು ಜನಾಂಗದ “ಬುಡಕಟ್ಟು ಮಹಿಳೆಯರ ಆರೋಗ್ಯ ಸ್ಥಿತಿ” ಕುರಿತು ಮುತ್ತಮ್ಮ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಪ್ರೊ.ವಿನಯ್ ರಜತ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದರು.
ಮುತ್ತಮ್ಮ ಅವರು ಹೆಬ್ಬೆಟ್ಟಗೇರಿ ಗ್ರಾಮದ ದಿ.ಕೊಕ್ಕಲೇರ ಕಾಳಯ್ಯ ಹಾಗೂ ಕಾವೇರಿ ಕಾಳಯ್ಯ ಅವರ ಪುತ್ರಿ ಮತ್ತು ಬೇಂಗೂರು ಗ್ರಾಮದ ಪಟ್ಟಮಾಡ ಉದಯ್ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.










