ಮಡಿಕೇರಿ ಸೆ.26 : ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾಗಿ ಮುಂಡಂಡ ಸಿ.ನಾಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕುಲ್ಲೇಟೀರ ಅಜಿತ್ ನಾಣಯ್ಯ ಅವರು ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಯಾವುದೇ ಕಾರಣಕ್ಕು ಚುನಾವಣೆಗೆ ಅವಕಾಶ ನೀಡದೆ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಯಬೇಕೆಂದು ಹಿರಿಯರಿಂದ ಸಲಹೆ ಬಂದ ಹಿನ್ನೆಲೆ ಅಜಿತ್ ನಾಣಯ್ಯ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.
ಕಾರ್ಯದರ್ಶಿ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದರಾದರೂ ಹೊಂದಾಣಿಕೆ ಸೂತ್ರದ ಮೂಲಕ ಮುಕ್ಕಾಟಿರ ಎಂ.ವಿನಯ್ ಅವರು ಅವಿರೋಧವಾಗಿ ಆಯ್ಕೆಯಾದರು. ಆದರೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಜಿತ್ ನಾಣಯ್ಯ ಅವರಿಗೆ ಕಾರ್ಯದರ್ಶಿ ಸ್ಥಾನ ಬಿಟ್ಟುಕೊಡುವ ಮೂಲಕ ವಿನಯ್ ಸೌಹಾರ್ದತೆಯನ್ನು ಮೆರೆದರು.
ಒಟ್ಟು 21 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾದರು, ಏಳು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಮುಂದೆ ನಡೆಯುವ ಆಡಳಿತ ಮಂಡಳಿಯ ಕಾರ್ಯಕಾರಿಣಿ ಸಭೆಯಲ್ಲಿ ಅಜಿತ್ ನಾಣಯ್ಯ ಅವರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ವಿನಯ್ ಅವರನ್ನು ನಿರ್ದೇಶಕರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲು ಚುನಾವಣಾ ಪ್ರಕ್ರಿಯೆಯ ಸಭೆಯು ನಿರ್ಧರಿಸಿತು.
Breaking News
- *ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ : ಇಂಗ್ಲೀಷ್ ಜೊತೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಸಂರಕ್ಷಣೆ ಅಗತ್ಯ : ಡಾ.ದೊಡ್ಡೇಗೌಡ ಅಭಿಮತ*
- *ಸರ್ವರ ಸಹಕಾರದಿಂದ ಮೂರ್ನಾಡುವಿನಲ್ಲಿ ಯಶಸ್ವಿಯಾದ 69ನೇ ಕನ್ನಡ ರಾಜ್ಯೋತ್ಸವದ “ಕನ್ನಡ ಹಬ್ಬ”*
- *ಡಿ.2 ರಿಂದ 8ರ ವರೆಗಿನ ವಾರ ಭವಿಷ್ಯ : ಯಾವ ರಾಶಿಗೆ ಏನು ಫಲ..?*
- *ಕುಶಾಲನಗರ ವಲಯ ಇಸ್ಲಾಮಿಕ್ ಕಲೋತ್ಸವ : ಕೊಡ್ಲಿಪೇಟೆ ಯೂನಿಟ್ ಚಾಂಪಿಯನ್*
- *ಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ : ದತ್ತಿ ಪ್ರಶಸ್ತಿ ಪ್ರದಾನ*
- *ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಮನ ಸೆಳೆದ ಔರ-2ಕೆ24 ತಾಂತ್ರಿಕ ಉತ್ಸವ*
- *ಮಡಿಕೇರಿ : ಡಿ.7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ*
- *ಮಡಿಕೇರಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ : ಎಂ.ಪಿ.ಸುಜಾ ಕುಶಾಲಪ್ಪ*
- *ಮದೆನಾಡು ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ನುಡಿಹಬ್ಬ : ವಿದ್ಯಾರ್ಥಿಗಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ : ಪಟ್ಟಡ ಶಿವಕುಮಾರ್ ಕರೆ*
- *ಗೋಣಿಕೊಪ್ಪ : ಜಿಎಂಪಿ ಶಾಲಾ ಶತಮಾನೋತ್ಸವ ಸಮಿತಿಯ QR ಕೋಡ್ ಬಿಡುಗಡೆ*