ಮಡಿಕೇರಿ ಅ.2 : ರೋಟರಿ ಮಡಿಕೇರಿ ವತಿಯಿಂದ ಮೂವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂತ ಜೋಸೆಫರ ಶಾಲಾ ಶಿಕ್ಷಕಿ ಗರ್ಟೂಡ್ ಟಿ.ಜಿ, ಕೊಡಗು ವಿದ್ಯಾಲಯದ ಪೊನ್ನಮ್ಮ ಪಿ.ಎಸ್ ಹಾಗೂ ಚೆಂಬು ಸರಕಾರಿ ಶಾಲೆಯ ಕಾಮಾಕ್ಷಿ ಪಿ.ಎಸ್ ಅವರು ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದರು.
ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರದ ಕುರಿತು ಪ್ರಶಸ್ತಿ ವಿಜೇತರು ಅಭಿಪ್ರಾಯ ಹಂಚಿಕೊಡರು.
ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್ ಎಂ.ಕೆ, ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ರತ್ನಾಕರ ರೈ, ಮಡಿಕೇರಿ ರೋಟರಿ ವುಡ್ಸ್ ನ ಕಾರ್ಯದರ್ಶಿ ಹರೀಶ್ ಕಿಗ್ಗಾಲ್, ಸಾಹಿತ್ಯ ಪರಿಷತ್ತಿನ ರಂಜಿತ್, ಇನ್ನರ್ ವೀಲ್ ಸದಸ್ಯೆಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.











