ಮಡಿಕೇರಿ ಅ.2 : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅ. 20 ರಂದು ಶುಕ್ರವಾರ ನಗರದ ಗಾಂಧಿ ಮೈದಾನದಲ್ಲಿ 10 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪಧೆ೯ಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪಧೆ೯ಗಳು ಅ. 20 ರಂದು ಶುಕ್ರವಾರ ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗಲಿದೆ. ಮಕ್ಕಳಿಂದ ಸಂತೆ ಮತ್ತು ಮಕ್ಕಳಿಂದ ಅಂಗಡಿ – ಎಸ್ ಎಸ್ ಎಲ್ ಸಿ ಒಳಗಿನ ವಿದ್ಯಾಥಿ೯ಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಟ 5 ವಿದ್ಯಾಥಿ೯ಗಳು ಪಾಲ್ಗೊಳ್ಳಬಹುದು.. ಮಕ್ಕಳ ಅಂಗಡಿಯಲ್ಲಿ ಗರಿಷ್ಟ ಇಬ್ಬರು ಸ್ಪಧಿ೯ಗಳಿಗೆ ಅವಕಾಶವಿದೆ. ಮಕ್ಕಳಿಂದ ಮಂಟಪ- 10 ನಿಮಿಷದ ಪ್ರದಶ೯ನಾವಧಿಯುಳ್ಳ ಮಂಟಪ ತಯಾರಿಕಾ ಸ್ಪಧೆ೯ಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು.
ಛದ್ಮವೇಶ ಸ್ಪಧೆ೯- ಎಲ್ ಕೆ.ಜಿ.ಯಿಂದ 1 ನೇ ತರಗತಿ, 2 ನೇ ತರಗತಿಯಿಂದ 4 ನೇ ತರಗತಿ, 5 ರಿಂದ 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪಧೆ೯ಗಳು ನಡೆಯಲಿದ್ದು, ಗರಿಷ್ಠ 2 ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ.
ಕ್ಲೇ ಮಾಡೆಲಿಂಗ್ – 4 ರಿಂದ 6 ನೇ ತರಗತಿ ಮತ್ತು 8 ರಿಂದ 10 ನೇ ತರಗತಿ ವಿದ್ಯಾಥಿ೯ಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪಧೆ೯ ಆಯೋಜಿತವಾಗಿದೆ.
ಅ. 20 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ಸ್ಪಧಿ೯ಗಳು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪಧೆ೯ಗಳು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗುತ್ತದೆ.
ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಸಂಪಕ೯ ಸಂಖ್ಯೆಗಳು ಇಂತಿವೆ.
ಮಕ್ಕಳಿಂದ ಸಂತೆ – ಶಫಾಲಿ ರೈ 9741523484. ಮಕ್ಕಳಿಂದ ಅಂಗಡಿ ಸ್ಪಧೆ೯ – ಪ್ರಿಯಾ ಪ್ರಶಾಂತ್ 9449915522.
ಮಕ್ಕಳಿಂದ ಮಂಟಪ- ಗಾನಾ ಪ್ರಶಾಂತ್ 9449713748, ಛದ್ಮವೇಶ ಸ್ಪಧೆ೯ – ಶಮ್ಮಿ ಪ್ರಭು 944 9833179, ನಮಿತಾ 9448976405 ಕ್ಲೇ ಮಾಡೆಲಿಂಗ್ – ಸುಮನಾ ಶ್ರೀಹರಿ – 7353078661, ರೀನಾ 9448793619. ಎಲ್ಲಾ ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೆ ದಿನಾಂಕ ಅಕ್ಟೋಬರ್ 10.
Breaking News
- *ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತ ಅಮಾನತು*
- *ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ*
- *ಸಿಎನ್ಸಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ ಆಚರಣೆ*
- *ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಅಭಿನಂದನೆ*
- *‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
- *ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ*
- *ಕೆ.ಎಸ್.ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ*
- *ಕಾಲ್ಚೆಂಡು ಪಂದ್ಯಾವಳಿ : ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್*
- *ವಿರಾಜಪೇಟೆ : ವಿವಿಧತೆಯಲ್ಲಿ ಏಕತೆಕಂಡಿರುವ ಸಂವಿಧಾನವನ್ನು ಗೌರವಿಸುವಂತಾಗಬೇಕು : ವಕೀಲ ಪುಷ್ಪರಾಜ್*
- *ಸೋಮವಾರಪೇಟೆ : ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*