ಮಡಿಕೇರಿ ಅ.4 : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.22 ರಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಶ್ವೇತಾ ಪ್ರಶಾಂತ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.22 ರಂದು ಬೆಳಗ್ಗೆ 10 ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವಷ೯ದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ.
ಮಹಿಳಾ ದಸರಾ ಅಂಗವಾಗಿನ ಸ್ಪಧೆ೯ಗಳ ವಿವರ ಇಂತಿದೆ.
ಎಥ್ ನಿಕ್ ಫ್ಯಾಷನ್ ಶೋ 20 ರಿಂದ 30, ಮತ್ತು 35 ರಿಂದ 45 ವಷ೯ ವಯೋಮಿತಿಯ ಮಹಿಳೆಯರಿಗೆ. ಕನಾ೯ಟಕದ ವಿವಿಧ ಉಡುಗೆಗಳಿಗೆ ಆದ್ಯತೆ – (ಒಟ್ಟು 3 ರಿಂದ 4 ಗುಂಪುಗಳಿಗೆ ಅವಕಾಶ, 1 ಗುಂಪಿನಲ್ಲಿ 10 ಜನರು ಕಡ್ಡಾಯವಾಗಿ ಇರಬೇಕು, ಉಡುಗೆ, ಆಭರಣ, ವಸ್ತ್ರ, ನಡಿಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
ಗಾರ್ಭಾ ನೃತ್ಯ ಸ್ಪಧೆ೯ : 20 ರಿಂದ 30 ವಷ೯ದ ಮಹಿಳೆಯರಿಗಾಗಿ – (3 ರಿಂದ 4 ಗುಂಪುಗಳಿಗೆ ಅವಕಾಶ, 1 ಗುಂಪಿನಲ್ಲಿ 6 ರಿಂದ 10 ಜನರು ಇರಬೇಕು)
30 ರಿಂದ 40 ವರ್ಷ ವಯೋಮಿತಿ ಮಹಿಳೆಯರಿಗೆ : 100 ಮೀಟರ್ ಓಟದ ಸ್ಪರ್ಧೆ , ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ , ಹಗ್ಗ ಜಗ್ಗಾಟ : 4 ಗುಂಪುಗಳಿಗೆ ಅವಕಾಶ ವಿರುತ್ತದೆ. (ಒಂದು ಗುಂಪಿನಲ್ಲಿ 10 ಜನ ಇರಬೇಕು),
40 ರಿಂದ 50 ವರ್ಷ ವಯೋಮಿತಿ ಮಹಿಳೆಯರಿಗೆ : 100 ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು., ಬಕೆಟ್ ಗೆ ಚೆಂಡನ್ನು ಹಾಕುವುದು.
50 ರಿಂದ 60 ವರ್ಷ ವಯೋಮಿತಿ ಮಹಿಳೆಯರಿಗೆ : ಬಾಸ್ಕೆಟ್ ಬಾಲ್ (20 ರಿಂದ 25 ಜನರಿಗೆ ಅವಕಾಶ) , ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು
60 ರಿಂದ 70 ವರ್ಷ ವಯೋಮಿತಿ ಮಹಿಳೆಯರಿಗೆ : ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ,
70 ರಿಂದ 80 ವರ್ಷ ವಯೋಮಿತಿ ಮಹಿಳೆಯರಿಗೆ : ಸೂಜಿಗೆ ನೂಲನ್ನು ಹಾಕುವುದು, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು .
ವೇದಿಕೆ ಮೇಲೆ ನಡೆಯುವ ಇತರ ಸ್ಪಧೆ೯ಗಳು : ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು, ಮತ್ತು ವಾಲಗತ್ತಾಟ್.
ಸ್ಪರ್ಧಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಐ.ಡಿ. ತರತಕ್ಕದ್ದು ಎಂದು ಮಹಿಳಾ ದಸರಾ ಸಂಚಾಲಕಿ ಶ್ವೇತಾಪ್ರಶಾಂತ್ ತಿಳಿಸಿದ್ದಾರೆ.
ಮಹಿಳಾ ದಸರಾ ಅಂಗವಾಗಿನ ಎಲ್ಲಾ ಸ್ಪಧೆ೯ಗಳಿಗೆ ನೋಂದಾಯಿಸಲು ಕೊನೇ ದಿನಾಂಕ – ಅಕ್ಟೋಬರ್ 12. ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆಗಳು –
ಸವಿತಾ ಕುಡೆಕಲ್ – 9535898352.
ಮೀನಾ ಕುಮಾರಿ – 95917 59983.
ಶ್ವೇತಾ ಪ್ರಶಾಂತ್ – 9980938700.
ಮಿನಾಝ್ -8310891269.
ವೀಣಾಕ್ಷಿ – 87623 03208.
ಸವಿತಾ ರಾಕೇಶ್ – 7975409495.
ಕನ್ನಿಕೆ – 77608 40754








