ಮಡಿಕೇರಿ ಅ. 5 : ಕೊಡಗು ವಿದ್ಯಾಲಯದ ಶಾಲೆಯ 9ನೇ ತರಗತಿ ವಿದ್ಯಾಥಿ೯ ಗೋಲ್ಡನ್ ಸಾರ್ಜೆಂಟ್ ಜಿ.ಎಸ್.ಸುಹಿತ್ ನ್ನು ಸನ್ಮಾನಿಸಲಾಯಿತು.
ಸೆ.19 ರಿಂದ 30ರ ವರೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರದ, ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾನೆ.
ಈ ಶಿಬಿರದ ಆಯ್ಕೆಯ ಮೊದಲು 3 ತಿಂಗಳ ತರಬೇತಿ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕರ್ನಾಟಕ ಮತ್ತು ಗೋವ ಡೈರೆಕ್ಟರೇಟ್ ನಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರಕ್ಕೆ ಸುಹಿತ್ ಆಯ್ಕೆಯಾಗಿದ್ದ.
ಕೊಡಗು ವಿದ್ಯಾಲಯದ ಎನ್. ಸಿ. ಸಿ. ಅಧಿಕಾರಿ ಮೇಜರ್ ದಾಮೋದರ್ ರ ಅವರ ತರಬೇತಿಯಿಂದ ಈ ಸಾಧನೆಯನ್ನು ಮಾಡಿರುವುದಾಗಿ 19 ನೇ ಕನಾ೯ಟಕ ಎನ್ ಸಿಸಿ ಬೆಟಾಲಿಯನ್ ಕೆಡೆಟ್ ಸುಹಿತ್ ಹೇಳಿದ್ದಾರೆ.
ಎನ್ ಸಿಸಿಯಲ್ಲಿ ಸಾಧನೆ ಮಾಡಿದ ಹೆಮ್ಮೆಯ ವಿದ್ಯಾರ್ಥಿಯನ್ನು ಕೊಡಗು ವಿದ್ಯಾಲಯದ ವತಿಯಿಂದ ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪೋಷಕರಾದ ಸುರೇಂದ್ರ, ಗೀತಾ ಸುರೇಂದ್ರರ ಸಮ್ಮುಖದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ.ಎಸ್ ಸುಮಿತ್ರಾ, ಆಡಳಿತ ವ್ಯವಸ್ಥಾಪಕ ರವಿ ಪಿ ಹಾಗೂ ಮೇಜರ್ ದಾಮೋದರ್ ಅವರು ವಿದ್ಯಾರ್ಥಿ ಸುಹಿತ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಸುರೇಂದ್ರ ಮಾತನಾಡಿ ತಮ್ಮ ಮಗನ ಸಾಧನೆ ಹಾಗೂ ಅದಕ್ಕೆ ಕಾರಣಕರ್ತರಾದ ಶಾಲೆಯ ಪರಿಶ್ರಮವನ್ನು ಶ್ಲಾಘಿಸಿದರು. ಇಲ್ಲಿನ ಶಿಕ್ಷಕ ವೃಂದ ಪ್ರತಿ ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರತೆಗೆದು ಅವರ ಸಮಗ್ರ ಬೆಳವಣಿಗೆ ಕಾರಣರಾಗಿದ್ದಾರೆ . ಇದನ್ನು 9ವರ್ಷಗಳಿಂದ ಕಾಣುತ್ತಾ ಬಂದಿದ್ದೇನೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಶಿಕ್ಷಕರು ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕ – ಶಿಕ್ಷಕೇತರ ವರ್ಗದವರು ಹಾಜರಿದ್ದರು.








