ಮಡಿಕೇರಿ ಅ.6 : ರಾಷ್ಟ್ರೀಯ ಆರ್ಥೋಡಾಂಟಿಕ್ ಜಾಗೃತಿ ವಾರದ ಅಂಗವಾಗಿ ಮಡಿಕೇರಿಯ ಹಿಲ್ ರೋಡ್ ನಲ್ಲಿರುವ ‘ ಹ್ಯಾಪಿ ಟೀತ್ ‘ ಡೆಂಟಲ್ ಕ್ಲಿನಿಕ್ ನಲ್ಲಿ ಉಚಿತ ವಕ್ರ ಹಲ್ಲು ತಪಾಸಣೆ (ಬ್ರೇಸಸ್ ಗಾಗಿ ಆರ್ಥೋಡಾಂಟಿಕ್ ಕನ್ಸಲ್ಟೇಷನ್ ) ಶಿಬಿರ ನಡೆಯಲಿದೆ ಎಂದು ದಂತ ತಜ್ಞೆ ಡಾ. ಅನುಶ್ರೀ ತಿಳಿಸಿದ್ದಾರೆ .
ಇಂದಿನಿಂದ (ಅ.6) ಅ.13 ರವರೆಗೆ ಶಿಬಿರ ನಡೆಯಲಿದೆ. ವಕ್ರ ಹಲ್ಲು ಹಾಗೂ ಹಲ್ಲುಗಳ ನಡುವಿನ ಅಂತರವನ್ನು ಸರಿಪಡಿಸುವ ಚಿಕಿತ್ಸೆಗೆ, ತಪಾಸಣೆಯು ವಯಸ್ಸಿನ ಮಿತಿ ಇಲ್ಲದೆ ಉಚಿತವಾಗಿ ನಡೆಯಲಿದೆ. ತಪಾಸಣೆಗೆ ಬರುವವರು ಲಕ್ಕಿ ಡ್ರಾ ದಲ್ಲಿ ಹೆಸರು ಹಾಕಿ ಆಯ್ಕೆಯಾದಲ್ಲಿ ಚಿಕಿತ್ಸೆಯು ಕೂಡ ಉಚಿತವಾಗಿ ನಡೆಸಲಾಗುವುದು. 2ನೆ ಸ್ಥಾನ ಪಡೆಯುವವರಿಗೆ ಶೇ.50 ರ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಫೋ : 7624960691 ಅನ್ನು ಸಂಪರ್ಕಿಸಬಹುದು.
ಸಮಯ : ಸೋಮ – ಶನಿ : ಬೆ :11 ರಿಂದ ಸಂಜೆ 5, ಭಾನು : ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ, ಬುಧವಾರ ರಜೆ ಇರಲಿದೆ.








