ವಿರಾಜಪೇಟೆ ಅ.6 : ಗೋಣಿಕೊಪ್ಪಲಿನ ಜಿಮ್ ಫಿಟ್ನೆಸ್ ಮಂತ್ರ ತರಬೇತಿ ಕೇಂದ್ರದಲ್ಲಿ ಪುಲ್ಲಪ್ಸ್, ಫ್ಲಾಂಕ್ ಮತ್ತು ಪುಶ್ ಅಪ್ ಸ್ಪರ್ಧೆ ನಡೆಯಿತು.
ಸ್ಪರ್ಧೆಗಳಲ್ಲಿ ಶಿಲ್ಪ, ಧನುಷ್ ತಿಮ್ಮಯ್ಯ, ಪ್ರಿಯಾ ಹಾಗೂ ಅನೇಕ ತರಬೇತಿದಾರರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡರು.
ತೀರ್ಪುಗಾರರಾಗಿ ಲಾಲ್ ಕುಮಾರ್ ಹಾಗೂ ಸಂತೋಷ್ ಕುಮಾರ್ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಜಿಮ್‍ನ ಮುಖ್ಯ ತರಬೇತಿದಾರರಾದ ರಫಿಕ್ ಇದ್ದರು.









