ಸೋಮವಾರಪೇಟೆ ಅ.6 : ಸೋಮವಾರಪೇಟೆ ಪ.ಪಂ ವತಿಯಿಂದ ಎಸ್.ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ನಾಮಕರಣ ಸದಸ್ಯರಾಗಿದ್ದ ಸಂದರ್ಭ ಕರ್ಕಳ್ಳಿ ಬಾಣೆಯಲ್ಲಿ ಸ್ಮಶಾನಕ್ಕೆ 1.75 ಎಕರೆ ಸರ್ಕಾರಿ ಜಾಗ ಮಂಜೂರು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರ ನೀಡಿದ ಸಲುವಾಗಿ ಎಸ್.ಮಹೇಶ್ ಅವರನ್ನು ಶಾಸಕ ಡಾ.ಮಂತರ್‍ಗೌಡ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ತಹಶೀಲ್ದಾರ್ ಎನ್.ಎಸ್.ನರಗುಂದ, ಸದಸ್ಯರಾದ ಪಿ.ಕೆ.ಚಂದ್ರು, ಶೀಲಾ ಡಿಸೋಜ, ಮೃತ್ಯಂಜಯ, ಮಹೇಶ್, ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ ಹಾಜರಿದ್ದರು.








