ನಾಪೋಕ್ಲು ಅ.6 : ಆರು ತಿಂಗಳ ನಂತರ ಮೂರು ವರ್ಷದವರೆಗಿನ ಮಕ್ಕಳ ತಾಯಂದಿರು ಉದ್ಯೋಗಕ್ಕಾಗಿ ಬಂದಾಗ ಈ ಮಕ್ಕಳ ರಕ್ಷಣೆ ಮತ್ತು ಪಾಲನೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಸಿಆರ್ ಪಿ ಮಂಜುಳಾ ಚಿತ್ರಾಪುರ ಹೇಳಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೊಡಗು ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಗಳ ಸಹಯೋಗದೊಂದಿಗೆ ಸ್ಥಳೀಯ ಕೆಪಿಎಸ್ ಪ್ರಾರ್ಥಮಿಕ ಶಾಲಾ ಆವರಣದಲ್ಲಿ” ಕೂಸಿನ ಮನೆ ‘ ಶಿಶುವಿಹಾರ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಪಿಎಸ್ ಶಾಲೆ ಉಪಾಧ್ಯಕ್ಷ ಹ್ಯಾರಿಸ್ ಮಾತನಾಡಿ, ಶುಭಹಾರೈಸಿದರು.
ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಪಂಚಾಯಿತಿ ಸದಸ್ಯರು ಮಹಮ್ಮದ್ ಖುರೇಶಿ, ಕಂಗಂಡ ಶಶಿ ಮಂದಣ್ಣ, , ಮುಖ್ಯ ಶಿಕ್ಷಕಿ ಚಂದ್ರಕಲಾ ,ಶಿಕ್ಷಕರು ,ಅಂಗನವಾಡಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಹಾಗೂ ಪೋಷಕರು ಹಾಜರಿದ್ದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚೋ0ದಕ್ಕಿ ಸ್ವಾಗತಿಸಿ, ಗ್ರಾಮ ಪಂಚಾಯತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ವಂದಿಸಿದರು.
ವರದಿ : ದುಗ್ಗಳ ಸದಾನಂದ








