ಕುಶಾಲನಗರ, ಅ.12 : ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಷಯದ ಉಪನ್ಯಾಸಕಿಯಾಗಿರುವ ಮೂಲತಃ ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರದ ನಿವಾಸಿ ಎಸ್.ಶೃತಿ ಮಂಜುನಾಥ್ ಎಂಬವರು ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ
ಅನ್ವಯಿಕ ವಿಜ್ಞಾನದಲ್ಲಿ ಪ್ರಸಕ್ತ ಸಂಶೋಧನೆ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಉತ್ತಮ ಪ್ರಬಂಧ ಮಂಡನೆ ಮಾಡಿದ ಎಸ್. ಶೃತಿ ಮಂಜುನಾಥ್ ಅವರಿಗೆ ಪ್ರಶಸ್ತಿ ಲಭಿಸಿದೆ.
“ಕಾರ್ಖಾನೆಗಳಿಂದ ಹೊರಹೋಗುವ ತ್ಯಾಜ್ಯ ನೀರನ್ನು ಸ್ವಚ್ಛಗೊಳಿಸಲು ” ಬಣ್ಣ: ಹೊರಹೀರುವಿಕೆ: ಅಧ್ಯಯನಕ್ಕಾಗಿ ಬಾಳೆ ದಿಂಡಿನ ಖಾಂಡದ ಕೋಶಗಳುಳ್ಳ ನಾರಿನ ಆಧಾರಿತ ಕಾಂತೀಯ ಅತೀ ಸೂಕ್ಷ್ಮ ಸಂಯೋಜಿತ ವಸ್ತುಗಳನ್ನು ಹೀರಿಕೊಳ್ಳುವ ಅಭಿವೃದ್ದಿ” ಕುರಿತು ಮಂಡಿಸಿದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶೃತಿ ಮಂಡಿಸಿದ ಉತ್ತಮ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.
*ಪಿ.ಎಚ್.ಡಿ.ಅಧ್ಯಯನ* : ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಬಿ ವಿಶಾಲಾಕ್ಷಿ ಯವರ ಮಾರ್ಗದರ್ಶನ ದಡಿಯಲ್ಲಿ ಶೃತಿ ಅವರು ಪಿ ಎಚ್ ಡಿ ಅದ್ಯಯನ ಮಾಡುತ್ತಿದ್ದಾರೆ.
ಶೃತಿ ಅವರು ಸೋಮವಾರಪೇಟೆಯ ಪುಷ್ಪ ಎಸ್. ಸಾಲ್ಯಾನ್ ಅವರ ಪುತ್ರಿಯಾಗಿದ್ದಾರೆ.