ಕುಶಾಲನಗರ ಅ.18 : ಬಾರವಿ ಕನ್ನಡ ಸಂಘದ ವತಿಯಿಂದ ಕೊಡಗು-ಮೈಸೂರು ಗಡಿಯಲ್ಲಿನ ಕಾವೇರಿ ಪ್ರತಿಮೆ ವೃತ್ತದಲ್ಲಿ 11ನೇ ವರ್ಷದ ಕಾವೇರಿ ಸಂಕ್ರಮಣ ಆಚರಣೆ ಮಾಡಲಾಯಿತು.
ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ನೂತನವಾಗಿ ನಿರ್ಮಿಸಿದ ಅನ್ನ ಸಂತರ್ಪಣ ಭವನವನ್ನು ಎಸ್.ಎಲ್.ಎನ್ ಕಂಪನಿ ಮಾಲೀಕ ಸಾತಪ್ಪನ್ ಉದ್ಘಾಟಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭ ಬಾರವಿ ಕನ್ನಡ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಕಾವೇರಿ ಪ್ರತಿಮೆ ಹಾಗೂ ಅನ್ನ ಸಂತರ್ಪಣೆ ಕಟ್ಟಡಕ್ಕೆ ತಾನು ವೈಯಕ್ತಿಕವಾಗಿಯೂ ಸರ್ಕಾರದಿಂದ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಬಾರವಿ ಕನ್ನಡ ಸಂಘದ ಅಧ್ಯಕ್ಷ ಬಬೀ0ದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಕುಶಾಲನಗರ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಿರಣ್ ಕುಮಾರ್, ಸಮಾಜ ಸೇವಕ ಚಂದ್ರು, ರಾಜಶೇಖರ್ ಹಾಗೂ ಕೊಪ್ಪ ಭಾಗದ ಗ್ರಾಮಸ್ಥರು, ಪ್ರಮುಖರು ಹಾಜರಿದ್ದರು.