ಮಡಿಕೇರಿ ಅ.19 : ಮೈಸೂರು ವಿಶ್ವವಿದ್ಯಾನಿಲಯದ 103ನೇ ಘಟಿಕೋತ್ಸವದಲ್ಲಿ ಎಂ.ಎ ತತ್ವಶಾಸ್ತ್ರ ವಿಷಯದಲ್ಲಿ ವಿರಾಜಪೇಟೆಯ ಮರಿಯಾ ವಿನ್ಸಿ ಜೋಸ್ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
7 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. ಮರಿಯಾ ವಿನ್ಸಿ ಜೋಸ್ ಅವರು ಪ್ರಸ್ತುತ ಕೊಡಗು ವಿಶ್ವವಿದ್ಯಾನಿಲಯದ ವಿರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.
ಇವರು ವಿರಾಜಪೇಟೆಯ ಹೆಗ್ಗಳ ಗ್ರಾಮದ ನಿರ್ಮಲ ಗಿರಿ ನಿವಾಸಿ ಪಿ.ಪಿ.ಜೋಸ್ ಹಾಗೂ ಅನ್ನಮ್ಮ ಜೋಸ್ ದಂಪತಿಯ ಕಿರಿಯ ಪುತ್ರಿ ಮತ್ತು ಜಾನ್ಸನ್ ಟಿ.ಟಿ ಅವರ ಪತ್ನಿ.













