ಮಡಿಕೇರಿ ಅ.21 : ಸಮರ್ಥ ಕನ್ನಡಿಗರು ವತಿಯಿಂದ ನ.5 ರಂದು ಮಡಿಕೇರಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ.
1-7 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ (ಎರಡು ವಿಭಾಗಗಳಲ್ಲಿ ) : ಪ್ರೌಢಶಾಲೆಯ ಮಕ್ಕಳಿಗೆ ಜಾನಪದ ಸಮೂಹ ನೃತ್ಯ ಸ್ಪರ್ಧೆ. ನೃತ್ಯಕ್ಕೆ ಕಾಲಾವಕಾಶ 5 ನಿಮಿಷಗಳು, ತಂಡದಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳಿರಬೇಕು.
ಮಹಿಳೆಯರಿಗೆ ಸಮೂಹ ಗಾಯನ ಸ್ಪರ್ಧೆ :: ಯಾವ ಕನ್ನಡ ಹಾಡನ್ನಾದರೂ ಹಾಡಬಹುದು. ತಂಡದಲ್ಲಿ 6ರಿಂದ 10 ಸದಸ್ಯರು ಇರಬೇಕು. ಕರೋಕೆ ಬಳಸಿ ಹಾಡುವಂತಿಲ್ಲ. 4 ನಿಮಿಷ ಕಾಲಾವಕಾಶ.
ಪ್ರೌಡಶಾಲೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಗೆ ಹೆಸರು ನೋಂದಾಯಿಸಲು : ಮಹಿಳೆಯರ ಸಮೂಹ ಗಾಯನ : ಜಯಲಕ್ಷ್ಮಿ 9663119670
ಛದ್ಮವೇಷ : ಗಿರಿಜಾಮಣಿ -9110657754 ಸಮೂಹ ನೃತ್ಯ : ಚಿತ್ರಾ ಆರ್ಯನ್ 9449044117 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.