ವಿರಾಜಪೇಟೆ ಅ.30 : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ‘ರಸ್ತೆ ಸ್ವಚ್ಛತಾ ಕಾರ್ಯ” ನಡೆಯಿತು.
ಪೆರುಂಬಾಡಿಯ ಚೆಕ್‍ಪೋಸ್ಟ್‍ನಿಂದ (ತನಿಖಾ ಠಾಣೆ) ವಾಟೆಕೊಲ್ಲಿ ಅರಣ್ಯ ಇಲಾಖೆ ಕ್ಯಾಂಪ್‍ವರೆಗೆ ಕಾಲೇಜಿನ ಸುಮಾರು85 ಸ್ವಯಂ ಸೇವಕ-ಸೇವಕಿಯರನ್ನೊಳಗೊಂಡ ತಂಡವು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರಯಾಣಿಕರು ಮತ್ತುದಾರಿಹೋಕರು ಎಸೆದ ಪ್ಲಾಸ್ಟಿಕ್ ಮತ್ತುಇತರೆ ತ್ಯಾಜ್ಯಗಳನ್ನು ಸುಮಾರು 6ಕಿ.ಮೀ ವರೆಗೆಕಾಲ್ನಡಿಗೆಯ ಮೂಲಕ ಸಂಗ್ರಹಿಸಿ ಅರಣ್ಯಇಲಾಖೆಯಕ್ಯಾಂಪ್‍ಗೆ ನೀಡಲಾಯಿತು.
ವಾಟೆಕೊಲ್ಲಿಅರಣ್ಯ ಇಲಾಖಾ ಕ್ಯಾಂಪ್ 1ರ ಸುಮಾರು 8 ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಸ್ವಚ್ಛತಾ ಶ್ರಮದಾನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಹೆಚ್.ಎಲ್.ವೇಣುಗೋಪಾಲ್ ಮತ್ತು ವಾಟೆಕೊಲ್ಲಿ ಅರಣ್ಯ ಇಲಾಖೆ ಕ್ಯಾಂಪ್ 1ರ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕ-ಸೇವಕಿಯರು ಹಾಜರಿದ್ದರು.