ಮಡಿಕೇರಿ ನ.3 : ಪದವೀಧರ/ಸ್ನಾತಕ ಪದವೀಧರ ವಿದ್ಯಾರ್ಥಿಗಳಿಗೆ ಬ್ಯಾಂಕ್ ನೇಮಕಾತಿ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲು ನ.10 ರಂದು ಬೆಳಗ್ಗೆ 10.30 ಗಂಟೆಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ) ನಲ್ಲಿ ರಾಜ್ಯದ ಖ್ಯಾತ ಅಂಕಣಕಾರರು ಮತ್ತು ತರಬೇತುದಾರರಾದ ಆರ್.ಕೆ.ಬಾಲಚಂದ್ರ ಅವರಿಂದ “ಬ್ಯಾಂಕ್ ಪರೀಕ್ಷೆಗಳ ಕುರಿತು ಉಚಿತ ಜಾಗೃತಿ ಕಾರ್ಯಾಗಾರ” ನಡೆಯಲಿದೆ.
ನ.9 ರೊಳಗೆ ಮೊಬೈಲ್ ಸಂಖ್ಯೆ 8660217739 ಕ್ಕೆ ಕರೆ/ ವಾಟ್ಸಪ್ ಮಾಡಿ ಅಥವಾ https://tinyurl.com/Free-orientation ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ನೊಂದಾಯಿಸಿಕೊಂಡು ಈ ಅವಕಾಶದ ಸದುಪಯೋಗಪಡಿಸಿಕೊಳ್ಳುವಂತೆ ಕೃಷಿಕ್ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ ಎಚ್.ಪಿ.ಮೋಹನ್ ತಿಳಿಸಿದ್ದಾರೆ.










