ಮಡಿಕೇರಿ ನ.10 : 68 ನೇ ಕನ್ನಡ ರಾಜ್ಯೋತ್ಸವ ಮತ್ತು ‘ಕರ್ನಾಟಕ ಸುವರ್ಣ ಸಂಭ್ರಮ-50 ರ ಆಚರಣೆಯ ಪ್ರಯುಕ್ತ ನ.22 ರಂದು ಬೆಳಗ್ಗೆ 10 ಗಂಟೆಗೆ ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ಶಾಲಾ, ಕಾಲೇಜು, ಸಾರ್ವಜನಿಕರಿಗೆ, ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಗಳು ನಡೆಯಲಿದೆ.
ಈ ಸ್ಪರ್ಧೆಗಳ ಬಹುಮಾನವನ್ನು ನ.30 ರಂದು ಮಧ್ಯಾಹ್ನ 2.30 ಗಂಟೆಗೆ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.
ರಸ ಪ್ರಶ್ನೆ ಸ್ಪರ್ಧೆ ಪ್ರೌಢಶಾಲೆ/ ಕಾಲೇಜು(ಪ್ರತಿ ಶಾಲಾ ಕಾಲೇಜಿನಿಂದ 3 ವಿದ್ಯಾರ್ಥಿಗಳಿಗೆ ಅವಕಾಶ) ಹೆಸರು ನೋಂದಾಯಿಸಲು ವಸತಿ ರವೀಂದ್ರ 8970075594.
ಚಿತ್ರಕಲಾ ಸ್ಪರ್ಧೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು(ಪ್ರತಿ ಶಾಲಾ ಕಾಲೇಜಿನಿಂದ 3 ವಿದ್ಯಾರ್ಥಿಗಳಿಗೆ ಅವಕಾಶ) ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಹೆಸರು ನೋಂದಾಯಿಸಲು ಹರೀಶ್ 9448896487, ಸಿ.ಸಿ.ನಂದ 7760530274.
ಛದ್ಮವೇಷ ಸ್ಪರ್ಧೆ: ಯುಕೆಜಿಯಿಂದ 3 ನೇ ತರಗತಿ, 4 ನೇ ತರಗತಿಯಿಂದ 7ನೇ ತರಗತಿ, 8ನೇ ತರಗತಿಯಿಂದ 10ನೇ ತರಗತಿಯವರೆಗೆ (ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬಂಧಪಟ್ಟಂತೆ) ಹೆಸರು ನೋಂದಾಯಿಸಲು ವಸಂತಿ ರವೀಂದ್ರ 8970075594.
ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ : ಪ್ರೌಢಶಾಲೆ, ಕಾಲೇಜು (ಪ್ರತಿ ಶಾಲಾ ಕಾಲೇಜಿನಿಂದ 3 ವಿದ್ಯಾರ್ಥಿಗಳಿಗೆ ಅವಕಾಶ) (ನೀತಿಯನ್ನೊಳಗೊಂಡ ಕಥೆ). ಹೆಸರು ನೋಂದಾಯಿಸಲು ಜಲಾಕಾಳಪ್ಪ 8277131457.
ಕನ್ನಡ ಸಮೂಹ ಗೀತೆ :(ತಂಡದಲ್ಲಿ ಕನಿಷ್ಠ 4 ಮತ್ತು ಗರಿಷ್ಠ 10 ಸ್ಪರ್ಧಾಳುಗಳಿಗೆ ಅವಕಾಶ) ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರು. ಹೆಸರು ನೋಂದಾಯಿಸಲು ರುಬೀನ 9071194087 ನ್ನು ಸಂಪರ್ಕಿಸಬಹುದು.
ಕನ್ನಡ ಸಮೂಹ ನೃತ್ಯ : (ತಂಡದಲ್ಲಿ ಕನಿಷ್ಠ 4 ಮತ್ತು ಗರಿಷ್ಠ 10 ಸ್ಪರ್ಧಾಳುಗಳಿಗೆ ಅವಕಾಶ) ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು/ ಸಾರ್ವಜನಿಕರಿಗೆ (ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ಹಾಡು). ಹೆಸರು ನೋಂದಾಯಿಸಲು ಪವಿತ್ರ 9480290282 ನ್ನು ಸಂಪರ್ಕಿಸಬಹುದು.
ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಕ್ಕೆ 125 ಅಂಕ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ಈ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದ ಶಿಕ್ಷಕರ ಹೆಸರನ್ನು ಸನ್ಮಾನಕ್ಕಾಗಿ ತಿಳಿಸುವಂತೆ ಕೋರಿದೆ. ಹೆಸರು ನೋಂದಾಯಿಸಲು ಜ್ಯೋತಿ ಅರುಣ್ ಗೌರವ ಕಾರ್ಯದರ್ಶಿ 8861550444 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.









