ಮಡಿಕೇರಿ ನ.10 : ಪ್ರಸಕ್ತ(2023-24) ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟ, ಬೆಟ್ಟದಹಳ್ಳಿ ಸಿದ್ದಾರ್ಥನಗರ ಮಾನವತ ಯುವ ಸಂಘ ಇವರ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವು ನ.20 ರಂದು ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಹಳ್ಳಿ ಶಾಂತಳ್ಳಿ ಕುಮಾರ ಲಿಂಗೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಕೋರಿದ್ದಾರೆ.
ಹೆಚ್ಚಿನ ವಿವರಗಳಿಗೆ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು ಜಿಲ್ಲೆ 9481213920, 9591137275, ಚಂದ್ರಿಕಾ, ಅಧ್ಯಕ್ಷರು, ತಾಲ್ಲೂಕು ಯುವ ಒಕ್ಕೂಟ, ಸೋಮವಾರಪೇಟೆ ದೂ.ಸಂ.9480747935 ಮತ್ತು ಆದರ್ಶ್, ಅಧ್ಯಕ್ಷರು, ಮಾನವತ ಯುವಕ ಸಂಘ, ಬೆಟ್ಟದಳ್ಳಿ, ಶಾಂತಳ್ಳಿ ಮೊ.ಸಂ.9141079884 ನ್ನು ಸಂಪರ್ಕಿಸಬಹುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ: ಜನಪದ ನೃತ್ಯ(10 ಜನ) 15 ನಿಮಿಷ ಮತ್ತು ಜನಪದ ಗೀತೆ (10 ಜನ) 7 ನಿಮಿಷ. ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು (ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.
ವೈಯಕ್ತಿಕ ಸ್ಪರ್ಧೆಗಳು:-ಜನಪದ ನೃತ್ಯ(7 ನಿಮಿಷ) ಮತ್ತು ಜನಪದ ಗೀತೆ(7 ನಿಮಿಷ). ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.
ಕಥೆ ಬರೆಯುವುದು(60 ನಿಮಿಷ). ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು. ಈಗಾಗಲೇ ಪ್ರಕಟವಾಗಿರಬಾರದು, ಅಕ್ಷರಗಳು ಸ್ಪಷ್ಟವಾಗಿರಬೇಕು. ಯಾವುದ ಜಾತಿ/ ಪಂಥ/ ಧರ್ಮ ಜನಾಂಗವನ್ನು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು (1000 ಪದಗಳಿಗೆ ಮೀರಬಾರದು).
ಪೋಸ್ಟರ್ ಮೇಕಿಂಗ್ (ಬಿತ್ತಿ ಪತ್ರ ತಯಾರಿಕೆ) (90 ನಿಮಿಷ). ಕನ್ನಡ/ಆಂಗ್ಲ/ಹಿಂದೆ ಭಾಷೆಯಲ್ಲಿ ಮಾತ್ರ ಇರಬೇಕು. ಬಿತ್ತಿ ಪತ್ರವು ಯಾವುದೇ ಸಂಸ್ಥೆ ಅಥವಾ ಬ್ರಾಂಡ್ ಹೆಸರು ಇರಬಾರದು. ತಾವು ಸಲ್ಲಿಸುವ ಬಿತ್ತ ಪತ್ರದ ಕೆಳಗೆ 20-30 ಪದಗಳೊಳಗೆ ಇರುವ ಶೀರ್ಷಿಕೆಯನ್ನು ಒಳಗೊಂಡಿರಬೇಕು. ಬಿತ್ತ ಪತ್ರವನ್ನು ಸ್ಥಳದಲ್ಲೇ ತಯಾರಿಸತಕ್ಕದ್ದು(ಪೋಸ್ಟರ್ ಎ3 ಸೈಜ್ ಡ್ರಾಯಿಂಗ್ ಶೀಟ್).
ಘೋಷಣೆ (3 ನಿಮಿಷ) : ಆಂಗ್ಲ/ ಹಿಂದಿ ಭಾಷೆಯಲ್ಲಿ ಇರಬೇಕು (ರಾಷ್ಟ್ರ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು), ಕನ್ನಡ ಭಾಷೆಯನ್ನು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಮಾತ್ರ ಸೀಮಿತಗೊಳಿಸಿದೆ. ಸ್ಪರ್ಧಿಗಳು ಸಿದ್ದಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ ಭಾಷಣ ಮಾಡಬೇಕು. ತೀರ್ಮಾನವು ಭಾಷಣದ ನಿಕರತೆ, ಹರಿವು, ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸುವ ಅಂಶಗಳು, ಶಬ್ಧ/ಪದಗಳು ಪುನರಾವರ್ತನೆ ಆಗದಿರುವುದು. ವಿಷಯದ ಬಗ್ಗೆ ಅರಿವು ಮತ್ತು ಆತ್ಮ ವಿಶ್ವಾಸ ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ.
ಛಾಯಾಚಿತ್ರ: ಪ್ರಗತಿ ಶೀಲ ಭಾರತ, ಆತ್ಮನಿರ್ಭರ ಭಾರತ, ಯೋಗ, ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಪ್ರಕೃತಿ ದೃಶ್ಯಗಳು ಈ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಸ್ಪರ್ಧಿಗಳು ತಾವು ಸಲ್ಲಿಸುವ ಬಿತ್ತ ಪತ್ರವು 20-30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು.









