ಸುಂಟಿಕೊಪ್ಪ ನ.11 : ಹಿಂದೂ ಜಾಗರಣ ವೇದಿಕೆಯ ವತಿಯಿಂದ ಮಾದಾಪುರ ಗಣಪತಿ ದೇವಾಲಯದಲ್ಲಿ ಕುಟ್ಟಪ್ಪ ಸ್ಮರಣಾರ್ಥ ಶಾಂತಿ ಪೂಜೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಕುಟ್ಟಪ್ಪ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಪ್ರಮುಖರಾದ ಭೋಜೇಗೌಡ, ದಿ.ಕುಟ್ಟಪ್ಪ ಅವರ ಪುತ್ರ ಡಿ.ಕೆ.ಡಾಲಿ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಾಯೋಜಕ ಅಜಿತ್ ಕುಕ್ಕೇರಾ, ಪ್ರಮುಖರಾದ ಚೇತನ್ ಶಾಂತಿನಿಕೇತನ, ವಿನಯ್, ತಾಲ್ಲೂಕು ಸಾಯೋಜಕ ವಿನಯ್ ಕುಮಾರ್, ಹೇಮಂತ್, ಗಪ್ಪು ಸೋಮಯ್ಯ, ಬಿಪಿನ್, ಸೂರಜ್, ಕೊಪ್ಪತಂಡ ಗಣೇಶ್, ಅಶೋಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ಸುನಿಲ್ ಮಾದಾಪುರ ಸ್ವಾಗತಿಸಿ, ನಿರ್ವಹಿಸಿ ವಂದಿಸಿದರು.









