Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿಜೇತರು
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿಜೇತರು

ನವೆಂಬರ್ 11, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ನ.11 :  ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ.
ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದ ಬಿದ್ದಾಟಂಡ ಎ.ರಮೇಶ್‍ರಿಗೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ, ಮಡಿಕೇರಿ ತಾಲ್ಲೂಕಿನ ಕೊಂಗಂಡ ಎ. ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕಿನ ಚಿರಿಯಪಂಡ ಕೆ.ಉತ್ತಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಎಚ್.ಎಸ್.ಸುಬ್ಬಪ್ಪರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’ ಮತ್ತು ಮಡಿಕೇರಿಯ ಮಣವಟ್ಟೀರ ಕಾವೇರಿಯಮ್ಮ ಪೂವಣ್ಣ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

 ಬಿದ್ದಾಟಂಡ ಎ. ರಮೇಶ್ ಚಂಗಪ್ಪ – ಕೊಡಗು ಸಹಕಾರ ರತ್ನ

ಜಿಲ್ಲೆಗೊಬ್ಬರಂತೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2023 ರ ಕೊಡಗು ಸಹಕಾರ ರತ್ನಕ್ಕೆ ಭಾಜನರಾದವರು ಶ್ರೀ ಬಿದ್ದಾಟಂಡ ಎ. ರಮೇಶ್ ಚಂಗಪ್ಪ ಮಡಿಕೇರಿ ತಾಲೂಕು ಕೊಳಕೇರಿ ಗ್ರಾಮದ ಬಿದ್ದಾಟಂಡ ಎ. ರಮೇಶ್ ಚಂಗಪ್ಪರವರು ಕೊಡಗು ಜಿಲ್ಲಾ ಹಾಪ್‍ಕಾಮ್ಸ್‍ನಲ್ಲಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ನಿ., ಮಡಿಕೇರಿಯಲ್ಲಿ 2005-2010 ರವರೆಗೆ ನಿರ್ದೇಶಕರಾಗಿ ಅದೇ ಅವಧಿಯಲ್ಲಿ ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದು, 2010 ರಿಂದ ಪ್ರಸ್ತುತವರೆಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2002 ರಿಂದ ಪ್ರಸ್ತುತವರೆಗೂ ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಾಗುತ್ತಿದೆ. ಈ ಅವಧಿಯಲ್ಲಿ ಮಂಡ್ಯ ಹಾಪ್‍ಕಾಮ್ಸ್‍ಗೆ ನಾಮನಿರ್ದೇಶನಗೊಂಡಿರುತ್ತಾರೆ. ನಾಪೋಕ್ಲು ಸೌಹಾರ್ಧ ಸಹಕಾರಿಯು ಇವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಂಗಂಡ ಎ. ತಿಮ್ಮಯ್ಯ – ಮಡಿಕೇರಿ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ

ಮಡಿಕೇರಿಯ ಕೊಂಗಂಡ ಎ. ತಿಮ್ಮಯ್ಯನವರು 1983 ರಿಂದ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 15 ವರ್ಷಗಳ ಕಾಲ ನಿರ್ದೇಶಕರಾಗಿ 1 ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 1985 ರಿಂದ ಸೇವೆ ಸಲ್ಲಿಸುತ್ತಿರುವ ಇವರು ಒಂದು ಅವಧಿಗೆ ಅಧ್ಯಕ್ಷರಾಗಿ 35 ವರ್ಷಗಳಿಂದ ನಿರ್ದೇಶಕರಾಗಿ ಮುಂದುವರೆಯುತ್ತಿದ್ದಾರೆ. ಕೊಡಗು ಸೌಹಾರ್ಧ ಸಹಕಾರಿ ನಿ., ಮಡಿಕೇರಿಯಲ್ಲಿ ನಿರ್ದೇಶಕರಾಗಿರುವ ಇವರು ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ., ಬೆಂಗಳೂರು ಇಲ್ಲಿ 2004 ರಿಂದ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

 ಚಿರಿಯಪಂಡ ಕೆ. ಉತ್ತಪ್ಪ – ವಿರಾಜಪೇಟೆ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ
ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪನವರು ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1971 ರಿಂದ ನಿರಂತರವಾಗಿ ಅಂದರೆ ಕಳೆದ 51 ವರ್ಷಗಳಿಂದ ನಿರ್ದೇಶಕರಾಗಿ, ಸುಮಾರು 36 ವರ್ಷಗಳ ಕಾಲ ಅಧ್ಯಕ್ಷರಾಗಿ ತಮ್ಮ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಡಿಕೇರಿಯ ಜನತಾ ಬಜಾರ್‍ನಲ್ಲಿ ಒಂದು ಅವಧಿಗೆ ನಿರ್ದೇಶಕರಾಗಿ, ವಿರಾಜಪೇಟೆಯ ಮಾರಾಟ ಮಹಾಮಂಡಳದಲ್ಲಿ ಸತತ 3 ಅವಧಿಗೆ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.

 ಎಚ್.ಎಸ್. ಸುಬ್ಬಪ್ಪ – ಸೋಮವಾರಪೇಟೆ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ
ನಿಡ್ತದ ಹಿತ್ತಲಗೇರಿ ಗ್ರಾಮದ ಸುಬ್ಬಪ್ಪನವರು 1979 ರಲ್ಲಿ ನಿಡ್ತ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ಬಾರಿ ಸತತವಾಗಿ ಆಯ್ಕೆಯಾಗಿರುತ್ತಾರೆ. 1989 ರಲ್ಲಿ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಆಯ್ಕೆಯಾಗಿ ನಂತರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ 2018ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

 ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ – ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ
ಮಡಿಕೇರಿಯ ನಿವಾಸಿ ಶ್ರೀಮತಿ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ ಇವರು ಮಡಿಕೇರಿ ಕೋಟೆ ಮಹಿಳಾ ಸಹಕಾರ ಸಂಘ, ಮಹದೇವಪೇಟೆ ಮಹಿಳಾ ಸಹಕಾರ ಸಂಘಗಳಲ್ಲಿ ನಿರ್ದೇಶಕಿಯಾಗಿ, ಕೊಡಗು ಮಹಿಳಾ ವಿವಿದೊದ್ಧೇಶ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1984 ರಲ್ಲಿ ಒಂದು ಅವಧಿಗೆ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿಗೆ ನಿರ್ದೇಶಕಿಯಾಗಿದ್ದ ಇವರು ಅದೇ ಅವಧಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿಯೂ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ., ಬೆಂಗಳೂರಿನಲ್ಲಿ ಉಪಾಧ್ಯಕ್ಷೆಯಾಗಿ, ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.17: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ (ರಿ.) ಆಶ್ರಯದಲ್ಲಿ 19ನೇ ವರ್ಷದ ಅದ್ದೂರಿ…

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ಇಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿ ದಸರಾ ಸಂಭ್ರಮಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ; ಪ್ರಾಣಿ ಪ್ರಿಯರ ಮನಗೆದ್ದ ವಿವಿಧ ತಳಿಗಳು

ಅಕ್ಟೋಬರ್ 17, 2026

SSLC, ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ: ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ

ಅಕ್ಟೋಬರ್ 17, 2026

ನಾಳೆ ಮಡಿಕೇರಿಯಲ್ಲಿ ಮಹಿಳಾ ದಸರಾ: ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 17, 2026

ಅ.19ರಂದು ರೋಟರಿ ಮಡಿಕೇರಿಯಿಂದ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರ

ಅಕ್ಟೋಬರ್ 17, 2026

ಗಗನಕ್ಕೇರಿದ ಬೇಳೆಕಾಳುಗಳ ಬೆಲೆ; ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ!

ಅಕ್ಟೋಬರ್ 17, 2026

ಬೇಟೋಳಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ವನದುರ್ಗೆಗೆ ವಿಶೇಷ ಪೂಜೆ

ಅಕ್ಟೋಬರ್ 17, 2026

ಮೈಸೂರು ದಸರಾ ಕಂಬಳಕ್ಕೆ ತೆರಳುವ ಕೋಣಗಳಿಗೆ ಮಡಿಕೇರಿಯಲ್ಲಿ ಸ್ವಾಗತ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.