ಮಡಿಕೇರಿ ನ.19 : ಮನೆಯ ಸಮೀಪವೇ ಲಾರಿ ಡಿಕ್ಕಿಯಾಗಿ ಅಮ್ಮತ್ತಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಅವರು ನಿಧನ ಹೊಂದಿದ್ದಾರೆ.
ಮನೆಗೆ ಇಟ್ಟಿಗೆ ತಂದಿದ್ದ ಲಾರಿ ಹಿಂಬದಿಗೆ ಬರುತ್ತಿದ್ದಾಗ ಅಲ್ಲೇ ನಿಂತಿದ್ದ ಬೋಸ್ ದೇವಯ್ಯ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಬಿಜೆಪಿಯ ಹಿರಿಯ ಮುಖಂಡರೂ ಆಗಿದ್ದ ಬೋಸ್ ದೇವಯ್ಯ ಅವರು, ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
::: ಸಂತಾಪ :::
ಬೋಸ್ ದೇವಯ್ಯ ಅವರ ನಿಧನಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಂತಾಪ ಸೂಚಿಸಿದ್ದಾರೆ. ಸರಳ ಸಜ್ಜನಿಕೆಯ ಸ್ನೇಹಜೀವಿ ಬೋಸ್ ದೇವಯ್ಯ ಅವರ ಅಗಲಿಕೆ ಅತೀವ ದು:ಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.











