ಸಿದ್ದಾಪುರ ನ.19 : ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಸಂಘಟನೆಯ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾದ ನೇತೃತ್ವದಲ್ಲಿ ನ.21 ರಂದು ಸುಂಟಿಕೊಪ್ಪದಲ್ಲಿ ಉಲಮಾ ಸಮ್ಮೇಳನ ನಡೆಯಲಿದೆ.
ಸುಂಟಿಕೊಪ್ಪ ಜಾಮಿಅ ಜೂನಿಯರ್ ಶರಿಯತ್ ಅರೇಬಿಕ್ ಕಾಲೇಜಿನಲ್ಲಿ ಬೆಳಿಗ್ಗೆ 8.30 ಕ್ಕೆ ಕಂಬಿಬಾಣೆಯಲ್ಲಿ ಅಂತ್ಯ ವಿಶ್ರಾಂತಿ ಗೊಳ್ಳುತ್ತಿರುವ ಕಾಕು ಉಪ್ಪಾಪ (ನ, ಮ ) ರವರ ದರ್ಗಾ ಝಿಯಾರತ್ ಮೂಲಕ ಆರಂಭಗೊಳ್ಳುವ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಮೂಸಕ್ಕೋಯ ಉಸ್ತಾದ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪ ಖಾಝಿ ಎಂ.ಎಂ.ಅಬ್ದುಲ್ಲಾ ಫೈಝಿ ವಹಿಸಲಿದ್ದಾರೆ. ಕೊಡಗು ಜಿಲ್ಲೆಯ ಸರ್ವ ಉಲಮಾಗಳು ಸಮ್ಮೇಳನದಲ್ಲಿ ಭಾಗವಹಿಲಿದ್ದಾರೆ
ಪವಿತ್ರ ಇಸ್ಲಾಂ ಧರ್ಮದ ನೈಜವಾದ ಆಶಯ, ಆದರ್ಶ, ಆಚಾರ ವಿಚಾರಗಳನ್ನು ಮುಸ್ಲಿಂ ಸಮಾಜದ ಜನಸಾಮಾನ್ಯರಿಗೆ ತಲುಪಿಸಿ ಕೊಡುವ ಅತಿ ದೊಡ್ಡ ಜವಾಬ್ದಾರಿಯು ಉಲಮಾಗಳಿಗಿದ್ದು ಪ್ರಸ್ತುತ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸುವ ಸಾಮರ್ಥ್ಯವು ಪ್ರತಿಯೊಬ್ಬ ಧಾರ್ಮಿಕ ನೇತಾರನಲ್ಲಿ ಇರಬೇಕಿದೆ. ಇಸ್ಲಾಂ ಧರ್ಮದ ನೈಜ ಮುಖವಾದ ಪವಿತ್ರ ಅಹ್ಲು ಸುನ್ನತ್ ವಲ್ ಜಮಾಹತ್ತಿನ ವಿಶ್ವಾಸಗಳನ್ನು ಇಸ್ಲಾಮಿನ ಪ್ರಾಮಾಣಿಕ ಗ್ರಂಥಗಳಿಂದ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿ ಇತರರಿಗೆ ಮಾದರಿಯಾಗಿ ಧಾರ್ಮಿಕ ಜವಾಬ್ದಾರಿಯನ್ನು ನಿರ್ವಹಿಸಲು ಉಲಮಾಗಳಿಗೆ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ನಿರ್ದೇಶನದ ಪ್ರಕಾರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎಂ ಅಬ್ದುಲ್ಲಾ ಫೈಝಿ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.