ಸಿದ್ದಾಪುರ ನ.25 : ನೆಲ್ಯಹುದಿಕೇರಿ ಯಂಗ್ ಮುಸ್ಲಿಂ ಅಸೋಶಿಯೇಷನ್ ಹಾಗೂ ಕೊಡಗು ವೈಧ್ಯಕೀಯ ಕಾಲೇಜು ಸಂಯುಕ್ತಾಶ್ರಯದಲ್ಲಿ ನೆಲ್ಯಹುದಿಕೇರಿ ದಾರುಸ್ಸಲಾಂ ಮದರಸ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಸ್ ಎನ್ ಡಿಪಿ ಕೊಡಗು ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಸಂಘಟನೆಗಳು ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ನೆಲ್ಯಹುದಿಕೇರಿ ಯಂಗ್ ಮುಸ್ಲಿಂ ಅಸೋಶಿಯೇಷನ್ ಉತ್ತಮ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದ್ದು, ರಕ್ತದಾನ ಶಿಬಿರದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ಮಾನವೀಯತೆಯ ಮೂಲಕ ಮನುಷ್ಯನ ಪ್ರಾಣ ಉಳಿಸಲು ಅತ್ಯಗತವಾಗಿರುವ ರಕ್ತದಾನ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ. ಪ್ರತಿಯೊಬ್ಬರು ರಕ್ತದಾನದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ಶಿಬಿರದಲ್ಲಿ 60ಕ್ಕೊ ಹೆಚ್ಚು ಜನ ರಕ್ತದಾನ ಮಾಡಿ ಮಾನವೀಯತೆ ತೋರಿದರು. ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿ ಗ್ರಾ ಪಂ ಪಿಡಿಒ ನಂಜುಂಡ ಸ್ವಾಮಿ, ನೈಮಾ ಅಧ್ಯಕ್ಷ ಎ.ಎಸ್. ಆರಿಫ್, ಗ್ರಾಪಂ ಸದಸ್ಯರಾದ ಎ.ಕೆ. ಹಕೀಂ, ಪಿ.ಹೆಚ್. ಅಫ್ಸಲ್, ಹನೀಫ, ಮುಸ್ತಫ, ಮುಸ್ಲಿಂ ಜಮಾಅತ್ ಅಧ್ಯಕ್ಷ ಒ.ಎಂ. ಅಬ್ದುಲ್ಲ ಸೇರಿದಂತೆ ಮತ್ತಿತರರು ಹಾಜರಿದ್ದರು.