ಸೋಮವಾರಪೇಟೆ ನ.25 : ದಾಸ ಶ್ರೇಷ್ಟ ಶ್ರೀ ಕನಕದಾಸರ ಜಯಂತಿ ಆಚರಿಸುವ ಸಲುವಾಗಿ ಸೋಮವಾರಪೇಟೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಶೀಲ್ದಾರ್ ಎಸ್.ಎನ್. ನರಗುಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ಎರಡೂ ತಾಲ್ಲೂಕಿನವರು ಒಟ್ಟಾಗಿ ಸೇರಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನ. 30 ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಸಂಗೊಳ್ಳಿ ರಾಯಣ್ಣ ಕುರುಬ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರಭಾಕರ್ ಮಾತನಾಡಿ, ಈ ಬಾರಿ ಕಾರ್ಯಕ್ರಮದಲ್ಲಿ 15 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲು ಸಭೆಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆಶ್ರಮ ಶಾಲಾ ವಿದ್ಯಾರ್ಥಿಗಳು, ಐಟಿಡಿಪಿ ಇಲಾಖೆ ಮತ್ತು ಸುತ್ತಲಿನ ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸಲು ಸಭೆಗೆ ತಿಳಿಸಿದರು.
ಅಂದು ಸರ್ಕಾರಿ ರಜೆ ಇರುವುದರಿಂದ ಎಲ್ಲ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಬೇಕೆಂದು ಜಿಲ್ಲಾ ಸಮಿತಿ ಉಪಾಧ್ಯಕ್ಷ ಚಿನ್ನಯ್ಯ ತಶೀಲ್ದಾರರಲ್ಲಿ ಮನವಿ ಮಾಡಿದರು.
ಇಂದು ನಡೆಯುತ್ತಿರುವ ಸಭೆಗೆ ಹೆಚ್ಚಿನವರು ಗೈರಾಗಿದ್ದಾರೆ. ಪೂರ್ವಭಾವಿ ಸಭೆಗೆ ಎಲ್ಲ ಅಧಿಕಾರಿಗಳು ಮತ್ತು ಆಚರಣಾ ಸಮಿತಿ ಸದಸ್ಯರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಚರಿಸಲು ಸಾಧ್ಯ ಎಂದು ತಹಶೀಲ್ದಾರ್ ನರಗುಂದ ಹೇಳಿದರು.
ವೇದಿಕೆ ಸಂಘಟನಾ ಕಾರ್ಯದರ್ಶಿ ಭರಮಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Breaking News
- *ಸುಂಟಿಕೊಪ್ಪ : ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
- *ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ : ಶಾಸಕ ಎ.ಎಸ್.ಪೊನ್ನಣ್ಣ*
- *ಮರಗೋಡು ಕಾರ್ಯಕ್ಷೇತ್ರದಲ್ಲಿ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಕಾರ್ಯಕ್ರಮ*
- *ಕಾಜೂರು ಕರ್ಣ ಕಾಡಾನೆ ಸೆರೆ : ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ, ಪರಿಶೀಲನೆ*
- *ಚೆನ್ನಯ್ಯನಕೋಟೆ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ : ಗಮನಸೆಳೆದ ವಿದ್ಯಾರ್ಥಿಗಳ ನೃತ್ಯೋತ್ಸವ : ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಣ್ಯರ ಕರೆ*
- *ಕೂಡಿಗೆ ಡಯಟ್ ಗೆ ಹಿರಿಯ ಉಪನ್ಯಾಸಕಿಯಾಗಿ ಮುಂಬಡ್ತಿ ಹೊಂದಿದ ಬಿ.ಎನ್.ಪುಷ್ಪ*
- *ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಉರೂಸ್ ಗೆ ಚಾಲನೆ*
- *ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-5 : ಕ್ರೀಡೆಯಿಂದ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ : ಶಾಸಕ ಎ.ಎಸ್.ಪೊನ್ನಣ್ಣ*
- *ಭಾಗಮಂಡಲ : ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು : ಸಿಎಂ*
- *ರೂ.1.50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಗೆ ಮನವಿ ಸಲ್ಲಿಸಿದ ಮುದ್ದಂಡ ಹಾಕಿ ಉತ್ಸವ ಸಮಿತಿ*