ಮಡಿಕೇರಿ ನ.27 : ಕ್ರೀಡೆಯಲ್ಲಿ ಛಲ, ಪರಿಶ್ರಮದೊಂದಿಗೆ ಗುರಿ ಇದ್ದಾಗ ಖಂಡಿತಾ ಗೆಲವು ಸುಲಭ ಸಾಧ್ಯ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ವಿದ್ಯಾಲಯದ ಸಹಯೋಗದಲ್ಲಿ ಆಯೋಜಿತ ಡಾ.ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಅಂತರ ಪ್ರೌಢಶಾಲಾ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯೆಯೊಂದಿದೆ ಕ್ರೀಡೆ ಕೂಡ ಜೀವನದ ಭಾಗವಾಗಬೇಕು. ಕ್ರಿಕೆಟ್ ಸೇರಿದಂತೆ ಕ್ರೀಡೆಯಲ್ಲಿ ಛಲದ ಜತೆ ನಿದಿ೯ಷ್ಟ ಗೆಲುವಿನತ್ತ ಗುರಿ ಇದ್ದರೆ ವಿಜಯ ಸುಲಭವಾಗುತ್ತದೆ. ಯಾವುದೇ ಸಾಧನೆಯನ್ನು ಉಚಿತವಾಗಿ ಸಾಧಿಸಲಾಗದು. ಅಂತೆಯೇ ಕ್ರೀಡೆಯಲ್ಲಿ ಕಠಿಣ ಪರಿಶ್ರಮವೂ ಸಾಧನೆಗೆ ಅತೀ ಮುಖ್ಯವಾಗುತ್ತದೆ ಎಂದು ಶಾಂತ ರಂಗಸ್ವಾಮಿ ಕಿವಿಮಾತು ಹೇಳಿದರು.
ಅಥ್ಲೆಟಿಕ್ಸ್ ಗೆ ಅತೀ ಹೆಚ್ಚಿನ ಸಾಧಕ ಕ್ರೀಡಾಪಟುಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಶಾಂತಾ ರಂಗಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಆದ್ಯಾತ್ಮಿಕ ನೆಲೆಯಾದ ಭಾರತ ಪುಣ್ಯ ಭೂಮಿ ಕೂಡ ಆಗಿದ್ದು, ಹೀಗಾಗಿಯೇ ವಿಶ್ವದಲ್ಲಿಯೇ ವಿಶ್ವಗುರುವಿನ ಸ್ಥಾನವನ್ನು ಭಾರತ ಪಡೆದಿದೆ. ಈ ಖ್ಯಾತಿಗೆ ಅನೇಕ ಸಾಧಕರ ಕೊಡುಗೆ ಇದೆ ಎಂದರಲ್ಲದೇ, 18 ನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್ ಕ್ರೀಡೆಯು 1932 ರಲ್ಲಿ ಭಾರತದಲ್ಲಿಯೂ ಪರಿಚಿತವಾಯಿತು. 1973 ರಲ್ಲಿ ಪ್ರಥಮ ಬಾರಿಗೆ ಮಹಿಳಾ ಕ್ರಿಕೆಟ್ ತಂಡವು ಕ್ರೀಡಾರಂಗಕ್ಕೆ ಪದಾಪ೯ಣೆ ಮಾಡಿತು. ಒಟ್ಟು 16 ಕ್ಯಾಪ್ಟನ್ ಗಳನ್ನು ಕಂಡಿರುವ ಮಹಿಳಾ ಕ್ರಿಕೆಟ್ ತಂಡದ 15 ನೇ ಕ್ಯಾಪ್ಟನ್ ಆಗಿರುವ ಶಾಂತಾ ರಂಗಸ್ವಾಮಿ ಕೊಡಗಿಗೆ ಬಂದಿರುವುದು ಮಹತ್ವದ ವಿಚಾರ ಎಂದು ಹೆಮ್ಮೆಯಿಂದ ನುಡಿದರು.
ಹೆಸರಾಂತ ಆಧ್ಯಾತ್ಮ ಗುರು ಮಮ್ತಾಜ್ ಅಲಿ (ಶ್ರೀ ಎಂ) ಮಾತನಾಡಿ, ಮಹಿಳಾ ಕ್ರಿಕೆಟ್ ತಂಡವು ಕೂಡ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಗುರುವಿನ ಸ್ಥಾನ ಪಡೆಯುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಹಿರಿಯರು ನೀಡಿದ ಮಾಗ೯ದಶ೯ನ ಎಲ್ಲರಿಗೂ ಜೀವನದಲ್ಲಿ ಮೇಲ್ಪಂಕ್ತಿಯಾಗಬೇಕು. 10 ವಷ೯ಗಳ ಹಿಂದೆ ಅಕಾಲಿಕವಾಗಿ ಸಾವನ್ನಪ್ಪಿದ ಕೊಡಗಿನ ಕ್ರೀಡಾ ಧ್ರುವತಾರೆಗಳಾದ ಡಾ.ಅಖಿಲ್ ಮತ್ತು ಅಶ್ವಥ್ ಅವರ ಸ್ಮರಣಾಥ೯ ಈ ಸಹೋದರರ ತಂದೆ ರಘುಮಾದಪ್ಪ ಅವರು ಪ್ರೌಡಶಾಲಾ ವಿದ್ಯಾಥಿ೯ಗಳಿಗೆ 9 ವಷ೯ಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಕಿರಿಯ ವಯಸ್ಸಿನ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಮೆಚ್ಚತಕ್ಕದ್ದು ಎಂದರು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮಾತನಾಡಿ, ಯಾವುದೇ ಪಂದ್ಯದಲ್ಲಿ ಸೋತಾಗ ಅಂಥ ತಂಡವನ್ನು ಟೀಕಿಸದೇ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಾಮಶಿ೯ಸಿ ಗೆಲುವಿನ ಹಾದಿಗೆ ಅಗತ್ಯವಾದ ಅಂಶಗಳನ್ನು ಕಂಡುಕೊಳ್ಳಬೇಕು ಎಂದರು.
ಕಾಯ೯ಕ್ರಮದಲ್ಲಿ ಕೊಡಗು ವಿದ್ಯಾಲಯದ ಕ್ರೀಡಾ ಸಮಿತಿ ಅಧ್ಯಕ್ಷ, ಪಂದ್ಯಾವಳಿಯ ಆಯೋಜಕರಾದ ಕೋಡಿಮಣಿಯಂಡ ರಘುಮಾದಪ್ಪ, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಪಿ. ರವಿ, ಪ್ರಮುಖರಾದ ಡಾ.ಅನಿಲ್ ಚಂಗಪ್ಪ, ಬೋಸ್ ಮಂದಣ್ಣ, ಅಜಿತ್ ಅಪ್ಪಚ್ಚು, ಸಿ.ಎಸ್.ಗುರುದತ್, ಯಾಲದಾಳ್ ಹರೀಶ್, ಐಮುಡಿಯಂಡ ನಂದ, ದಾಮೋದರ್, ದಿನೇಶ್, ಬಿ.ವಿ.ನಂದ ಸೇರಿದಂತೆ ಅನೇಕರು ಹಾಜರಿದ್ದರು.
ಕೊಡಗು ವಿದ್ಯಾಲಯದ ಶಿಕ್ಷಕಿ ಎ.ಜಿ.ದಿವ್ಯಾ ನಿರೂಪಿಸಿದರು. ವಿದ್ಯಾಥಿ೯ನಿಯರಾದ ಮೌಲ್ಯ ಪುಟ್ಟಯ್ಯ, ಪ್ರಥ್ವಿ ಪಿ.ರೈ ಪ್ರಾಥಿ೯ಸಿ, ಇಶಾನ್ ವಂದಿಸಿದರು.
ಕೊಡಗು ಬಾಲಕಿಯರ ಕ್ರಿಕೆಟ್ ತಂಡ ಅಸ್ತಿತ್ವಕ್ಕೆ :: ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಪ್ರೌಡಶಾಲಾ ವಿಭಾಗದ ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಬಾಲಕಿಯರ ಕ್ರಿಕೆಟ್ ತಂಡವು ರಾಜ್ಯಮಟ್ಟದ ಸ್ಪಧೆ೯ಗಳಿಗೂ ತೆರಳಲಿದೆ. ಮಡಿಕೇರಿಯಲ್ಲಿ ನಡೆದ ಪ್ರದಶ೯ನ ಪಂದ್ಯದಲ್ಲಿ ದಕ್ಷಿಣ ಕನ್ನಡ ಬಾಲಕಿಯರ ಕ್ರಿಕೆಟ್ ತಂಡವು 9 ವಿಕೆಟ್ ಗಳಿಂದ ಕೊಡಗು ಬಾಲಕಿಯರ ಕ್ರಿಕೆಟ್ ತಂಡವನ್ನು ಸೋಲಿಸಿತು.








