ಮಡಿಕೇರಿ ನ.27 : ತನಲ್ ಸ್ವಯಂ ಸೇವಕ ಸಂಘ ಕಣ್ಣೂರಿನ ತನಲ್ ಬೆಟಾಲಿಯನ್ ವತಿಯಿಂದ ನಗರದ ತನಲ್ ನೆರಳಿನ ಮನೆಯಲ್ಲಿ ಸಂಭ್ರಮದಿಂದ ಪುತ್ತರಿ ಹಬ್ಬವನ್ನು ಆಚರಿಸಲಾಯಿತು.
ತನಲ್ ಆಶ್ರಮ ವಾಸಿಗಳಿಗೆ ಪುತ್ತರಿ ಹಬ್ಬದ ಪ್ರಯುಕ್ತ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಬಿರಿಯಾನಿ ತಯಾರಿಸಿ ಬಡಿಸುವುದರೊಂದಿಗೆ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿ ರಸದೌತಣ ನೀಡಿದರು. ಮಡಿಕೇರಿಯ ಫೈವ್ ಸ್ಟಾರ್ ಸಿಂಗರ್ ತಂಡದ ಸದಸ್ಯರು ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು. ಆಶ್ರಮ ವಾಸಿಗಳು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ತನಲ್ ವ್ಯವಸ್ಥಾಪಕ ಮೊಹಮ್ಮದ್ ಮುಸ್ತಫ, ಪತ್ರಕರ್ತ ಎಂ.ಅಬ್ದುಲ್ಲ, ಶುಕೂರ್, ಸಾಮಾಜಿಕ ಕಾರ್ಯಕರ್ತ ಬಸಾಮ ಸೇರಿದಂತೆ ಗೆಳೆಯರ ಬಳಗ ಹಾಜರಿದ್ದರು.








