ಮಡಿಕೇರಿ ನ.27 : ವಾಣಿಜ್ಯ ಚಟುವಟಿಕೆ/ಉದ್ದಿಮೆಗಳನ್ನು ಪ್ರಾರಂಭಿಸಲು ಇಚ್ಛಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೌಶಲ್ಯಾಭಿವೃದ್ಧಿ ಇಲಾಖಾ ಮೂಲಕ ಉದ್ಯಮಶೀಲತಾ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ.
www.scsptsp.karnataka.gov.in/BMS/CDOC/EDPRegistrationForm.aspx ರಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272-225531 ನ್ನು ಸಂಪರ್ಕಿಸಬಹುದು.
ಅರ್ಜಿದಾರರಿಗೆ ನಿಗದಿಪಡಿಸಿರುವ ವಯೋಮಿತಿ 21 ರಿಂದ 50 ವರ್ಷ. ಪಿಯುಸಿ ಮತ್ತು ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಉದ್ದಿಮೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ನೀಡುತ್ತಿರುವ ತರಬೇತಿಯಾಗಿದ್ದು, ಯಾವುದೇ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಿರುವುದಿಲ್ಲ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆಯಾಗಿ 10 ದಿನಗಳಿಗೆ ರೂ.1 ಸಾವಿರಗಳನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ಉಪಹಾರ ಮತ್ತು ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಅಗತ್ಯವಿರುವ ದಾಖಲಾತಿಗಳು-ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂಕಪಟ್ಟಿ, ಅಭ್ಯರ್ಥಿಯ ಭಾವಚಿತ್ರ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.







